ಅರಸೀಕೆರೆ (ಹಾಸನ): ಕ್ಷೇತ್ರದಲ್ಲಿ ಎನ್.ಆರ್. ಸಂತೋಷ್ ಅವರಿಗೆ ಟಿಕೆಟ್ ತಪ್ಪಿದ್ದರಿಂದ ಆಕ್ರೋಶಗೊಂಡ ಬೆಂಬಲಿಗರು, ಬಿಜೆಪಿ ಬಾವುಟ ಸುಟ್ಟು ಹಾಕಿದರು.
ಬಿಜೆಪಿ ಫ್ಲೆಕ್ಸ್‌ಗಳನ್ನು ಹರಿದು ಹಾಕಿದ ಬೆಂಬಲಿಗರು, ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಘೋಷಣೆ ಕೂಗಿದರು. ‘ಬಿಜೆಪಿ ಟಿಕೆಟ್ ನೀಡಿರುವ ಜಿ.ವಿ. ಬಸವರಾಜು 5 ಸಾವಿರ ಮತ ಪಡೆಯಲ್ಲ. ಇಡೀ ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಹಾಳು ಮಾಡಿದ್ದಾರೆ’ ಎಂದು ಆರೋಪಿಸಿದರು.
‘ನಾನು ಎನ್.ಆರ್.ಸಂತೋಷ್ ಗೆಲ್ಲಲಿ ಎಂದು ಗಡ್ಡ ಬಿಟ್ಟಿದ್ದೆ. ಈಗ ಅವರಿಗೆ ಟಿಕೆಟ್ ನೀಡಿಲ್ಲ. ಬಿಜೆಪಿ ಸೋಲಲಿ ಎಂದು ಗಡ್ಡ ಬೋಳಿಸಿ ಬೆಂಗಳೂರಿನ ಬಿಜೆಪಿ ಕಚೇರಿಗೆ ಕಳುಹಿಸಿತ್ತೇನೆ’ ಎಂದು ಸಂತೋಷ್ ಬೆಂಬಲಿಗ ರಂಗನಾಥ್ ಹೇಳಿದರು.
ಈ ಮಧ್ಯೆ ಬೆಂಬಲಿಗರ ಜೊತೆ ಸಭೆ ನಡೆಸಿದ ಎನ್.ಆರ್. ಸಂತೋಷ್, ‘ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ. ಜೆಡಿಎಸ್‌ನಿಂದ ಬಿ.ಫಾರಂ ದೊರೆತಲ್ಲಿ ಜೆಡಿಎಸ್‌ನಿಂದ ಇಲ್ಲವೇ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ‘ ಎಂದು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.