ADVERTISEMENT

ಶ್ರವಣಬೆಳಗೊಳ: 8 ದಿನ ಜಾತ್ರೆಗೆ ಧರ್ಮಚಕ್ರ ಪೂಜೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 14:29 IST
Last Updated 18 ಏಪ್ರಿಲ್ 2024, 14:29 IST
ಶ್ರವಣಬೆಳಗೊಳ ಮುಖ್ಯರಸ್ತೆಯಲ್ಲಿ ಸರ್ವಾಹ್ಣ ಯಕ್ಷ  ಉತ್ಸವ ಗುರುವಾರ ಜರುಗಿತು
ಶ್ರವಣಬೆಳಗೊಳ ಮುಖ್ಯರಸ್ತೆಯಲ್ಲಿ ಸರ್ವಾಹ್ಣ ಯಕ್ಷ  ಉತ್ಸವ ಗುರುವಾರ ಜರುಗಿತು   

ಶ್ರವಣಬೆಳಗೊಳ: ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವ ಪ್ರಯುಕ್ತ ಧರ್ಮಚಕ್ರದ ಬಳಿ ಮೃತ್ತಿಕ ಸಂಗ್ರಹದೊಂದಿಗೆ  8 ದಿನಗಳ ಕಾಲ ಜರುಗುವ ಜಾತ್ರೆಗೆ ಪೀಠಾಧಿಪತಿ ಅಭಿನವ ಚಾರುಕೀರ್ತಿ ಸ್ವಾಮೀಜಿ ಗುರುವಾರ ಚಾಲನೆ ನೀಡಿದರು. ಜನರಿಗೆ ಅಕ್ಷತೆ ವಿತರಿಸಿ ಆಶೀರ್ವದಿಸಿದರು.

ಭಂಡಾರಿ ಬಸದಿಯ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಿ, ಮಂಗಳವಾದ್ಯಸಹಿತ  ಯಕ್ಷ ಮೆರವಣಿಗೆ ನಡೆಸಲಾಯಿತು. ಮಠದ ಬಸದಿಯಲ್ಲಿ ಚಂದ್ರನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಅಷ್ಟವಿಧಾರ್ಚನೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT