
ಹೊಳೆನರಸೀಪುರ: ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂಬ ಪ್ರವೃತ್ತಿ ಕಡಿಮೆ ಇರುವ ಇಂದಿನ ಸಮಾಜದಲ್ಲಿ ಶಿವಕುಮಾರ ಸ್ವಾಮೀಜಿಯವರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ, ತ್ರಿವಿಧ ದಾಸೋಹದ ಮೂಲಕ ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಟ್ಟಿದ್ದರು. ನಡೆದಾಡುವ ದೇವರೆಂದು ಖ್ಯಾತರಾದ ಶ್ರೀಗಳ ತತ್ವ, ಸಿದ್ಧಾಂತ ಹಾಗೂ ಆದರ್ಶಗಳು ಸರ್ವರಿಗೂ ದಾರಿ ದೀಪವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮಹಾಂತೇಶ ಮುನವಳ್ಳಿಮಠ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ಆಯೋಜನೆ ಮಾಡಿದ್ದ. ಶಿವಕುಮಾರ ಸ್ವಾಮೀಜಿಯವರ 7ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಅನ್ನ ದಾಸೋಹದ ಮೂಲಕ ಮೌಲ್ಯಯುತ ಜೀವನ ರೂಪಿಸಿಕೊಳ್ಳಲು ದಾರಿ ತೋರುವುದರ ಜೊತೆಗೆ ಮನುಕುಲವನ್ನು ಸಂತೈಸುತ್ತ, ಸಮಾಜಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರ ಸಂದೇಶ, ಆದರ್ಶ ಹಾಗೂ ತತ್ವಗಳನ್ನು ಅಳವಡಿಸಿಕೊಂಡು, ಅವುಗಳನ್ನು ಪಾಲನೆ ಮಾಡುತ್ತ ಮುನ್ನಡೆಯೋಣ ಎಂದರು.
ಶಿಕ್ಷಕ ಪರಮೇಶ್ ಪ್ರಧಾನ ಭಾಷಣ ಮಾಡಿದರು. ನ್ಯಾಯಾಲಯದ ಸಿಬ್ಬಂದಿ ಚೈತ್ರಾ ಪ್ರಾರ್ಥಿಸಿದರು. ಜಯಪ್ರಕಾಶ ಸ್ವಾಗತಿಸಿದರು. ಬಿ.ಎನ್. ಕೃಷ್ಣಮೂರ್ತಿ ವಂದಿಸಿದರು. ಶ್ವೇತಾ ನಿರೂಪಿಸಿದರು.
ಸಿವಿಲ್ ನ್ಯಾಯಾಧೀಶೆ ಚೇತನಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಐಶ್ವರ್ಯ ಗುಡದಿನ್ನಿ,. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಹೆಚ್ಚುವರಿ ಸರ್ಕಾರಿ ಸಹಾಯಕ ಅಭಿಯೋಜಕ ಸುರೇಶ್ ಜಿ.ಎಸ್., ವಕೀಲರಾದ ಉದಯರಂಜನ್, ಪುರುಷೋತ್ತಮ್, ಎಚ್.ಎಸ್. ಅರುಣ್‍ಕುಮಾರ್, ರಾಮಪ್ರಸನ್ನ, ರವೀಶ್, ನಟರಾಜ್, ಯು.ಆರ್. ಸತೀಶ್, ಪ್ರಶಾಂತ್, ಮೈತ್ರಿ ಕೆ.ಎನ್., ಕೆ.ಎಸ್.ಪ್ರಕಾಶ್, ಕೆ.ಆರ್.ಸುನೀಲ್, ಬಲರಾಮ, ದೇವರಾಜ್, ಸುನೀಲ್, ಚೇತನ್, ಮಮತಾ, ಸಂಗೀತಾ, ಜಯಲಕ್ಷ್ಮೀ, ರಾಮಪ್ರಸಾದ್, ಶಿವಕುಮಾರ್, ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.