ADVERTISEMENT

ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ವಿಜೇತರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 8:54 IST
Last Updated 31 ಡಿಸೆಂಬರ್ 2021, 8:54 IST
ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಯೊಂದಿಗೆ ಜೆಡಿಎಸ್ ಬೆಂಬಲಿತರು ಚನ್ನರಾಯಪಟ್ಟಣದಲ್ಲಿ ಗುರುವಾರ ಸಂಭ್ರಮಿಸಿದರು
ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಯೊಂದಿಗೆ ಜೆಡಿಎಸ್ ಬೆಂಬಲಿತರು ಚನ್ನರಾಯಪಟ್ಟಣದಲ್ಲಿ ಗುರುವಾರ ಸಂಭ್ರಮಿಸಿದರು   

ಚನ್ನರಾಯಪಟ್ಟಣ: ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ 17 ಸ್ಥಾನಗಳ ಪೈಕಿ 16 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಗುರುವಾರ ಫಲಿತಾಂಶ ಪ್ರಕಟವಾಗಿದೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳು ಮತ್ತು ಮತಗಳ ಸಂಖ್ಯೆ: ಕೆ. ಸಂಜೀತಾ (413 ಮತಗಳು), ಎ.ಆರ್. ಅನುರಾಧಾ ( 394), ಎಸ್.ಟಿ. ಮಹೇಶ್ (559), ಎಂ. ಚಂದ್ರಶೇಖರ್ (327), ಭಾರತಿ (311), ಅಫ್ತಾಭ್ ಪಾಷ (258), ಯಶೋದ (264), ಮೋಹನ ಕುಮಾರಿ (402), ಎಸ್.ಪಿ. ರಘು (526), ಶಾಲಿನಿ (226), ಎಸ್.ಬಿ. ಯಶಸ್ (306), ಎಸ್.ಆರ್. ರಾಧಾ (175), ಕೆ.ಎಂ. ಕೃಷ್ಣಮೂರ್ತಿ (233), ಆರ್. ಸ್ವಾಮಿ (380), ಎಂ.ವಿ.
ಕಾವ್ಯಶ್ರಿ (283), ಎನ್. ಆರ್. ವಾಸು (327) ಮತ ಪಡೆದಿದ್ದಾರೆ. ಎ.ಎಸ್. ಸುರೇಣಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ಮತದಾನ ನಡೆದಿತ್ತು. 5,255 ಮತಗಳ ಪೈಕಿ 4,434 ಮತದಾರರು ಹಕ್ಕು ಚಲಾಯಿಸಿದದರು. ಶೇ 84 ರಷ್ಟು ಮತದಾನ ನಡೆದಿತ್ತು.

ADVERTISEMENT

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ ಗೆಲುವು ಸಾಧಿಸಿದ ಅಭ್ಯರ್ಥಿ ಪರ ಬೆಂಬಲಿತರು ಮತ ಎಣಿಕೆ ಕೇಂದ್ರ ಹೊರಭಾಗದಲ್ಲಿ ಘೋಷಣೆ ಕೂಗುತ್ತ ಸಂಭ್ರಮಿಸಿದರು. ತಾಲ್ಲೂಕು ಕಚೇರಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.

3 ಸ್ಥಾನಕ್ಕೆ ಉಪಚುನಾವಣೆ: ಗ್ರಾಮ ಪಂಚಾಯಿತಿಯ ಮೂರು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ತಗಡೂರು ಗ್ರಾಮ ಪಂಚಾಯಿತಿಯ ಬೂವನಹಳ್ಳಿ ಕ್ಷೇತ್ರದಿಂದ ಸುಕನ್ಯಾ (559 ಮತಗಳು), ಬಾಗೂರು ಗ್ರಾಮ ಪಂಚಾಯಿತಿಯ ದ್ಯಾವೇನಹಳ್ಳಿ ಕ್ಷೇತ್ರದಿಂದ ಕೆ.ಆರ್. ಮೀನಾಕ್ಷಿ (242), ಗೌಡಗೆರೆ ಕ್ಷೇತ್ರದಿಂದ ಜಯಮ್ಮ 379 ಮತ ಪಡೆದು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.