ADVERTISEMENT

ಹೊಳೆನರಸೀಪುರ | ಸಿಂಧೂರ ಕಾರ್ಯಾಚರಣೆ: ಯೋಧರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:28 IST
Last Updated 14 ಮೇ 2025, 15:28 IST
<div class="paragraphs"><p>ಹೊಳೆನರಸೀಪುರದ ಸುಭಾಷ್ ವೃತ್ತದಲ್ಲಿ ಮಂಗಳವಾರ ನಿವೃತ್ತ ಸೈನಿಕರ ಸಂಘ ಹಾಗೂ ನಾಗರಿಕರು ಆಯೋಜಿಸಿದ್ದ ಯೋಧರಿಗೆ ಗೌರವ ಸಮರ್ಪಣೆ, ಕೃತಜ್ಞತೆ ಸಲ್ಲಿಸಲಾಯಿತು</p></div>

ಹೊಳೆನರಸೀಪುರದ ಸುಭಾಷ್ ವೃತ್ತದಲ್ಲಿ ಮಂಗಳವಾರ ನಿವೃತ್ತ ಸೈನಿಕರ ಸಂಘ ಹಾಗೂ ನಾಗರಿಕರು ಆಯೋಜಿಸಿದ್ದ ಯೋಧರಿಗೆ ಗೌರವ ಸಮರ್ಪಣೆ, ಕೃತಜ್ಞತೆ ಸಲ್ಲಿಸಲಾಯಿತು

   

ಹೊಳೆನರಸೀಪುರ: ‘ನಮ್ಮ ದೇಶದ ಮಹಿಳೆಯರ ಸಿಂಧೂರವನ್ನು ಅಳಿಸಿದ ಭಯೋತ್ಪಾದಕರ ನೆಲೆಯನ್ನು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಮೂಲಕ ದ್ವಂಸ ಗೊಳಿಸಿ ಭಯೋತ್ಪಾದಕರಿಗೆ ನೆಲೆ ಒದಗಿಸಿದ್ದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ನಮ್ಮ ಭಾರತೀಯ ಯೋಧರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಅಭಿನಂದನೆ ಹಾಗೂ ಕೃತಜ್ಞತೆಗಳು’ ಎಂದು ನಿವೃತ್ತ ಯೋಧ ವಸಂತ್‍ಕುಮಾರ್ ಯೋಧರ ದೇಶಭಕ್ತಿಯನ್ನು ಶ್ಲಾಘಿಸಿದರು.

ಪಟ್ಟಣದ ಸುಭಾಷ್ ವೃತ್ತದಲ್ಲಿ ಮಂಗಳವಾರ ನಿವೃತ್ತ ಸೈನಿಕರ ಸಂಘ ಹಾಗೂ ನಾಗರಿಕರು ಆಯೋಜಿಸಿದ್ದ ಸೈನಿಕರಿಗೆ ಅಭಿನಂದನೆ ಹಾಗೂ ಕೃತಜ್ಞತೆ, ಸೈನಿಕರ ಹಿತ ರಕ್ಷಣೆಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ADVERTISEMENT

‘ಭಾರತದ ಮುಂದೆ ನಿಂತು ಹೋರಾಡುವ ಶಕ್ತಿ ಇಲ್ಲದ ಪಾಕಿಸ್ತಾನ ಭಯೋತ್ಪಾದನೆ ಬೆಂಬಲಿಸುತ್ತಾ, ಪಹಲ್ಗಾಮ್ ಘಟನೆ ಮೂಲಕ ಭಾರತೀಯ ಸೇನೆಯನ್ನು ಕೆರಳಿಸಿದ ಪರಿಣಾಮ ನೂರಕ್ಕೂ ಹೆಚ್ಚು ಉಗ್ರರನ್ನು ಕೊಂದು ಅವರ ನೆಲೆಯನ್ನು ನಾಶ ಮಾಡಿದರು. ಈ ಘಟನೆ ಪಾಕಿಸ್ತಾನ ಕನಸಿನಲ್ಲಿಯೂ ಬೆಚ್ಚಿ ಬೀಳುವಂತೆ ಮಾಡಿದೆ’ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್, ಹಿರಿಯ ವಕೀಲ ಆರ್.ಡಿ.ರವೀಶ್ ಮಾತನಾಡಿ, ‘ಪಾಕಿಸ್ತಾನ ಭಾರತದ ಮೇಲೆ ಮಾಡಿರುವ ಯಾವುದೇ ಯುದ್ಧದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಮುಂದೆ ಆಗುವುದೂ ಇಲ್ಲ. ಈಗಾಗಲೇ ಬಭಿಕ್ಷೆ ಬೇಡಿ ಬದುಕುವ ಪರಿಸ್ಥಿತಿಗೆ ಬಂದಿರುವ ಪಾಕಿಸ್ತಾನ ಇನ್ನೂ ತನ್ನ ಕುಯುಕ್ತಿಯನ್ನು ನಿಲ್ಲಿಸಿಲ್ಲ. ಮತ್ತೊಮ್ಮೆ ಭಾರತದ ಮೇಲೆ ಯುದ್ಧ ಸಾರಿದರೆ ಪಾಕಿಸ್ತಾನ ವಿಶ್ವ ಭೂಪಟದಲ್ಲೇ ಇರುವುದಿಲ್ಲ’ ಎಂದರು.

ನಿವೃತ್ತ ಯೋಧರ ಸಂಘದ ಅಧ್ಯಕ್ಷ ಈಶ್ವರ್, ನಿವೃತ್ತ ಯೋಧರಾದ ಬಸಪ್ಪ, ರಮೇಶ್, ಚನ್ನಕೇಶವ, ರವಿಕುಮಾರ್, ಮಹದೇವಯ್ಯ, ರಾಜಯ್ಯ, ಮುಖಂಡರಾದ ಜೈಪ್ರಕಾಶ್, ಅಶೋಕ್, ಎಚ್.ಆರ್.ನರಸಿಂಹ, ಮುರಳೀಧರ ಗುಪ್ತ, ಖಾಲೀದ್, ಬಾಲಾಜಿ, ಮನೋಹರ, ಸುನಿಲ್, ರೋಹಿತ್, ಎಚ್.ಆರ್.ಮೂರ್ತಿ, ಈಶ್ವರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.