ADVERTISEMENT

ಕುಮಾರಸ್ವಾಮಿ ಭೇಟಿಗೂ ಮುನ್ನ ಶಾಸಕ ಸ್ವರೂಪ್‌ ಮನೆಯಲ್ಲಿ ಕೆರೆ ಹಾವು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 2:04 IST
Last Updated 22 ಡಿಸೆಂಬರ್ 2025, 2:04 IST
<div class="paragraphs"><p>ಹಾಸನದ ಶಾಸಕ ಸ್ವರೂಪ್‌ ಪ್ರಕಾಶ್ ಮನೆಗೆ ಬಂದಿದ್ದ ಕೆರೆ ಹಾವನ್ನು ಹಿಡಿದ ಸ್ನೇಕ್‌ ಕೇಶವ, ಅದನ್ನು ನೀರಿನಿಂದ ತೊಳೆದರು.</p></div>

ಹಾಸನದ ಶಾಸಕ ಸ್ವರೂಪ್‌ ಪ್ರಕಾಶ್ ಮನೆಗೆ ಬಂದಿದ್ದ ಕೆರೆ ಹಾವನ್ನು ಹಿಡಿದ ಸ್ನೇಕ್‌ ಕೇಶವ, ಅದನ್ನು ನೀರಿನಿಂದ ತೊಳೆದರು.

   

ಹಾಸನ: ಶಾಸಕ ಸ್ವರೂಪ್ ಪ್ರಕಾಶ್ ಅವರ ನಗರದ ನಿವಾಸದಲ್ಲಿ ಭಾನುವಾರ ಕೆರೆ ಹಾವು ಪ್ರತ್ಯಕ್ಷವಾಗಿದ್ದು, ಅದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ಹಾವು ಕಂಡು ಕುಟುಂಬದವರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಸ್ಥಳಕ್ಕೆ ಬಂದ ಉರಗ ತಜ್ಞ ​ಸ್ನೇಕ್ ಕೇಶವ, ಕೆರೆ ಹಾವನ್ನು ಸುರಕ್ಷಿತ ಹಿಡಿದರು. ​ ಶಾಸಕ ಸ್ವರೂಪ್‌ ಪತ್ನಿ ಡಾ.ಶ್ವೇತಾ, ಹಾವಿಗೆ ಪೂಜೆ ಸಲ್ಲಿಸಿದರು. ನಂತರ ಹಾವನ್ನು ಕಾಡಿಗೆ ಬಿಡಲಾಯಿತು.

ADVERTISEMENT

​ಶಾಸಕ ಸ್ವರೂಪ್ ನಿವಾಸಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿಗೂ ಮುನ್ನವೇ ಕೆರೆ ಹಾವು ಪ್ರತ್ಯಕ್ಷವಾಗಿದ್ದು, ಕುತೂಹಲ ಮೂಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.