
ಚನ್ನರಾಯಪಟ್ಟಣ: ‘ಕ್ರೀಡೆಗಳು ಸ್ನೇಹ ಸಂಬಂಧವನ್ನು ಬೆಸೆಯುತ್ತದೆ. ದೇಶಗಳ ನಡುವೆ ಸುಮಧುರ ಬಾಂಧವ್ಯ ಬೆಸೆಯುತ್ತದೆ’ ಎಂದು ವಿಧಾನಪರಿಷತ್ತು ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಹೇಳಿದರು.
ಪಟ್ಟಣದಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ಶಾಲಿನಿ ವಿದ್ಯಾಶಾಲೆಯ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
‘ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತವರು ವಿಚಲಿತರಾಗದೆ ಚೆನ್ನಾಗಿ ಅಭ್ಯಾಸ ಮಾಡಿ ಗೆಲುವು ಸಾಧಿಸಬೇಕು. ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ನೆನಪಿನ ಶಕ್ತಿ ವೃದ್ದಿಯಾಗುತ್ತದೆ. ನಾಯಕತ್ವದ ಗುಣ ರೂಢಿಸಿಕೊಳ್ಳಬಹುದು’ ಎಂದು ಹೇಳಿದರು.
ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯುವರಾಜ್ ಮಾತನಾಡಿ, ‘ಓದು, ಬರಹದಷ್ಟೇ ಕ್ರೀಡೆಯೂ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಸರ್ವತೋಮುಖ ಪ್ರಗತಿಗೆ ಕ್ರೀಡಾಚಟುವಟಿಕೆಗಳು ಸಹಕಾರಿಯಾಗಿದೆ ಎಂದು ತಿಳಿಸಿದರು. ಪುರಸಭೆ ಸದಸ್ಯ ಸಿ.ಎನ್. ಶಶಿಧರ್ ಮಾತನಾಡಿ, ಜೀವನದಲ್ಲಿ ಶಿಸ್ತು, ಸಂಯಮ ಅಗತ್ಯ. ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು. ರಾಷ್ಟ್ರೀಯ ವಾಲಿಬಾಲ್ ಆಟಗಾರ ಇನ್‍ಫೆಂಟ್ ವಿಶಾಲ್ ಮಾತನಾಡಿದರು.
ರಾಜ್ಯಮಕ್ಕಳ ಸಾಹಿತ್ಯಪರಿಷತ್ತು ಅಧ್ಯಕ್ಷ ಸಿ.ಎನ್. ಅಶೋಕ್, ಪರಿಷತ್ತು ಗೌರವಾಧ್ಯಕ್ಷ ಮಹದೇವ್, ಪದಾಧಿಕಾರಿ ಸಚಿನ್, ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಟಿ. ಆನಂದ್, ಶಿಕ್ಷಣ ಸಂಯೋಜಕ ಲೋಕೇಶ್, ಪ್ರಾಂಶುಪಾಲರಾದ ಮಮತಾ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿವೇಕ್, ಮುಖ್ಯಶಿಕ್ಷಕಿ ದೀಪ್ತಿ ಸೋಪಿಯಾ, ಉಪ ಪ್ರಾಂಶುಪಾಲರಾದ ಲತಾ, ದೈಹಿಕಶಿಕ್ಷಣ ನಿರ್ದೇಶಕ ಎ. ಅವಿನಾಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.