ADVERTISEMENT

ಹೊಳೆನರಸೀಪುರ | ಕ್ರಿಮಿನಾಶಕ ಸಿಂಪಡಿಸಿ ರೇಷ್ಮೆ ಗಿಡ, ಹುಳು ನಾಶ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 13:06 IST
Last Updated 15 ಫೆಬ್ರುವರಿ 2025, 13:06 IST
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮಸೂರು ಹೋಬಳಿ ದಾಳಗೌಡನಹಳ್ಳಿಯಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ಡಿ.ಕೆ. ಯೋಗೇಶ್ ಎಂಬುವವರ ರೇಷ್ಮೆ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿದ್ದು ಹುಳುಗಳು ಸುತ್ತು ಹೋಗಿದ್ದು ಕ್ರಿಮಿನಾಶಕ ಸಿಂಪಡಿಸಿದವರ ವಿರುದ್ಧ ದೂರು ದಾಖಲಿಸಿದ್ದಾರೆ.

ಹೊಳೆನರಸೀಪುರ: ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ದಾಳಗೌಡನಹಳ್ಳಿ ಗ್ರಾಮದಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ಡಿ.ಕೆ.ಯೋಗೇಶ್ ಎಂಬುವರ 2 ಎಕರೆ ಜಮೀನಿನ ರೇಷ್ಮೆ ಗಿಡಕ್ಕೆ ಸಿಂಪಡಿಸಬಾರದ ಕ್ರಿಮಿನಾಶಕ ಸಿಂಪಡಿಸಿ ಬೆಳೆನಾಶವಾಗಿ ಹುಳುಗಳೂ ಸತ್ತುಹೋಗಿವೆ.

ಇವರ ಮೇಲೆ ಮೊದಲಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಜಗಳ ಮಾಡುತ್ತಿದ್ದ ಪಕ್ಕದ ಜಮೀನಿನ ರೈತ ಮಹದೇವ, ಈತನ ಪುತ್ರ ಸಂಜು ಹಾಗೂ ಸುಷ್ಮಾ ಯೋಗೇಶನ ಜಮೀನಿಗೆ ಅತಿಕ್ರಮವಾಗಿ ಬಂದು ಔಷಧಿ ಸಂಪಡಿಸಿ ಹೋಗುತ್ತಿದ್ದನ್ನು ಕಂಡ ಯೋಗೇಶ್ ಹಳ್ಳಿಮೈಸೂರು ಠಾಣೆ ಹಾಗೂ ರೇಷ್ಮೆ ಇಲಾಖೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಹಳ್ಳಿಮೈಸೂರು ಠಾಣೆ ಎಸ್.ಐ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

 ರೈತ ಯೋಗೇಶ್ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ನನ್ನ ರೇಷ್ಮೆ ಬೆಳೆ ನಾಶ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ನನಗಾಗಿರುವ ನಷ್ಟ ಭರಿಸಿಕೊಡಬೇಕೆಂದು ವಿನಂತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.