ADVERTISEMENT

ಸೂರಜ್‌ಗೆ ಬೆಂಬಲ: ಪುರಸಭೆ ಸದಸ್ಯರ ಸ್ಪಷ್ಟನೆ

ಸದಸ್ಯರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಅಧ್ಯಕ್ಷೆ ವೀಣಾ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 15:40 IST
Last Updated 7 ಡಿಸೆಂಬರ್ 2021, 15:40 IST
ಹೊಳೆನರಸೀಪುರ ಪುರಸಭೆಯ ಜೆಡಿಎಸ್‌ನ 23 ಸದಸ್ಯರು, ಸುದ್ದಿಗೋಷ್ಠಿಯ ನಂತರ ಒಗ್ಗಟ್ಟು ಪ್ರದರ್ಶಿಸಿದರು
ಹೊಳೆನರಸೀಪುರ ಪುರಸಭೆಯ ಜೆಡಿಎಸ್‌ನ 23 ಸದಸ್ಯರು, ಸುದ್ದಿಗೋಷ್ಠಿಯ ನಂತರ ಒಗ್ಗಟ್ಟು ಪ್ರದರ್ಶಿಸಿದರು   

ಹಾಸನ: ‘ಹೊಳೆನರಸೀಪುರ ಪುರಸಭೆಯ ಎಲ್ಲಾ ಸದಸ್ಯರು ಒಗ್ಗಟ್ಟಾಗಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಅಥವಾ ಅಸಮಾಧಾನ ಇಲ್ಲ’ ಎಂದು ಪುರಸಭೆ ಅಧ್ಯಕ್ಷೆ ವೀಣಾ ರಾಜೇಶ್ ಸ್ಪಷ್ಟಪಡಿಸಿದರು.

‘ಜೆಡಿಎಸ್‌ನಿಂದ ಚುನಾಯಿತ ರಾಗಿರುವ 23 ಸದಸ್ಯರು ಒಟ್ಟಾಗಿಯೇ ಇದ್ದೇವೆ. ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆನೀಡಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಆರೋಪ ಸತ್ಯಕ್ಕೆ ದೂರವಾದುದು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಾಯಕ ಎಚ್‌.ಡಿ.ರೇವಣ್ಣ ಅವರ ಸಲಹೆ, ಸಹಕಾರದಿಂದಲೇ ಪಟ್ಟಣದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಡಿ.10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಡಾ. ಆರ್‌.ಸೂರಜ್ ಅವರನ್ನೇ ಬೆಂಬಲಿಸಲಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ.ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಮಾರ್ಗದರ್ಶನದಲ್ಲಿ ಪಟ್ಟಣದ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುತ್ತೇವೆ’ ಎಂದರು.

ADVERTISEMENT

ಸುದ್ದಿಗೋಷ್ಠಿಯಲ್ಲಿಪುರಸಭೆ ಉಪಾಧ್ಯಕ್ಷೆ ತ್ರಿಲೋಚನಾ, ಸದಸ್ಯರಾದ ಮಧು, ವಾಸಿಂ, ಮಂಜಣ್ಣ,ಪ್ರಸನ್ನ, ಸುಬ್ರಹ್ಮಣ್ಯ, ಶ್ರೀಧರ್‌, ಜುಕ್ರಲ್ಲಾಶರೀಫ್‌, ಜಗನ್ನಾಥ್‌, ಲಿಂಗಯ್ಯ, ಕುಮಾರಸ್ಮಾಮಿ,ಶಿವಣ್ಣ, ನಾಗಮಣಿ, ಜ್ಯೋತಿ, ಸಾವಿತ್ರಮ್ಮ, ಶಾಂತಿ, ಮಮತಾ, ಕಿರಣ್, ಶಫಿನಾಜ್‌ ಹಾಗೂಸುಧಾರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.