ಸಕಲೇಶಪುರ: ಪಶ್ಚಿಮಘಟ್ಟದಲ್ಲಿ ಪರಿಸರಸ್ನೇಹಿ ಪ್ರವಾಸೋಧ್ಯಮಕ್ಕೆ ಹೆಚ್ಚು ಒತ್ತು ಕೊಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಇಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ಅಮೆರಿಕ ಅಧ್ಯಕ್ಷ ಟ್ರಂಪ್ ನಮ್ ದೇಶದ ವಿದೇಶ ವಹಿವಾಟುಗಳ ಮೇಲೆ ಶೇ 50ರಷ್ಟು ತೆರಿಗೆ ವಿಧಿಸುವ ಮೂಲಕ ದಬ್ಬಾಳಿಕೆ ವರಸೆ ತೋರಿಸಲು ಮುಂದಾಗಿದ್ದಾರೆ. ಸ್ವದೇಶ ವಸ್ತುಗಳನ್ನು ಬಳಸಿದರೆ ನಮ್ಮ ದೇಶ ಸ್ವಾವಲಂಬಿಯಾಗುತ್ತದೆ. ಅಮೆರಿಕ ರೀತಿ ಮುಂದೊಂದು ದಿನ ಬೇರೆ ರಾಷ್ಟ್ರಗಳು ಸಹ ಹೆಚ್ಚು ತೆರಿಗೆ ವಿಧಿಸಿದರೆ ಯಾವುದೇ ರಾಷ್ಟ್ರಕ್ಕೂ ತಲೆಬಾಗುವ ಪರಿಸ್ಥಿತಿಯೇ ಬರುವುದಿಲ್ಲ’ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಬಿ.ಆರ್. ರೇಣುಕಾ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಚ್.ಸಿ. ಧನ್ಯಶ್ರೀ, ಸಮಾಜ ಸೇವಾ ಕ್ಷೇತ್ರದಲ್ಲಿ ಸಂಜೀತ್ ಶೆಟ್ಟಿ, ಕೆ.ಬಿ. ಶಶೀಧರ್, ಪೌರ ಕಾರ್ಮಿಕ ಕ್ಷೇತ್ರದಲ್ಲಿ ಡಿ.ಎಂ. ಚಂದ್ರಶೇಖರ್, ಕೃಷಿ ಕ್ಷೇತ್ರದಲ್ಲಿ ಕ್ಯಾನಹಳ್ಳಿ ಕೆ.ಎನ್. ಸುಬ್ರಹ್ಮಣ್ಯ, ದೇಶ ಸೇವೆ ಕ್ಷೇತ್ರದಲ್ಲಿ ಮಾಜಿ ಸೈನಿಕರಾದ ಕೆ. ವೆಂಕಟೇಶ್, ಎಲ್.ಎಸ್. ನಾಗರಾಜು, ಕಜಕೀಸ್ತಾನದಲ್ಲಿ ಇತ್ತಿಚೆಗೆ ನಡೆದ ಏಷ್ಯನ್ ಕರಾಟೆಯಲ್ಲಿ ಚಿನ್ನದ ಪದಕ ಪಡೆದ 8 ವರ್ಷದ ನಿಧಿತ್ ಗೌಡ, ಉತ್ತಮ ಆಡಳಿತ ಕ್ಷೇತ್ರದಲ್ಲಿ ಸೋಲಾರ್ ಬಳಕೆ ಹಾಗೂ ಹಸಿರೀಕರಣ ವಿಭಾಗದಲ್ಲಿ ದೇಶದ 2ನೇ ಅತ್ಯುತ್ತಮ ಗ್ರಾ,ಪಂ. ಪ್ರಶಸ್ತಿ ಪುರಸ್ಕೃತ ಬಿರಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಡಿ. ಸತಿಶ್, ಪಿಡಿಓ ಎಚ್.ಆರ್. ಗಿರೀಶ್ ಅವರನ್ನು ಸನ್ಮಾನಿಸಲಾಯಿತು.
ಪುರಸಭಾ ಅಧ್ಯಕ್ಷ ಜ್ಯೋತಿ ರಾಜ್‌ಕುಮಾರ್, ಉಪವಿಭಾಗಾಧಿಕಾರಿ ಎಚ್.ಡಿ. ರಾಜೇಶ್ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದರು. ತಹಶೀಲ್ದಾರ್ ಕೆ.ಎಸ್. ಸುಪ್ರೀತಾ, ಡಿವೈಎಸ್‌ಪಿ ಪ್ರಮೋದ್‌ಕುಮಾರ್ ಜೈನ್, ಕ್ಷೇತ್ರ ಶಿಕ್ಷಣ ಅಧಿಕಾರಿ ಪುಷ್ಪ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ.ಡಿ. ಗಂಗಾಧರ್, ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪುರಸಭಾ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಸುರಿಯುತ್ತಿದ್ದ ಮಳೆಯಲ್ಲಿಯೇ ರೋಟರಿ ಹಾಗೂ ಇತರ ಶಾಲೆಗಳ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.