ADVERTISEMENT

ಹಾಸನ: ಆರೋಗ್ಯದ ಕಾಳಜಿ ವಹಿಸಿ; ಶಾಸಕ ಪ್ರೀತಂ ಜೆ. ಗೌಡ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 15:42 IST
Last Updated 30 ಏಪ್ರಿಲ್ 2022, 15:42 IST
ಹಾಸನದಲ್ಲಿ ಏರ್ಪಡಿಸಿದ್ದ ಆರೋಗ್ಯ ಶಿಬಿರದಲ್ಲಿ ಸರ್ಕಾರಿ ಮಹಿಳಾ ನೌಕರರು ಹೆಸರು ನೋಂದಾಯಿಸಿದರು.
ಹಾಸನದಲ್ಲಿ ಏರ್ಪಡಿಸಿದ್ದ ಆರೋಗ್ಯ ಶಿಬಿರದಲ್ಲಿ ಸರ್ಕಾರಿ ಮಹಿಳಾ ನೌಕರರು ಹೆಸರು ನೋಂದಾಯಿಸಿದರು.   

ಹಾಸನ: ‘ಸರ್ಕಾರಿ ಮಹಿಳಾ ನೌಕರರು ಕೆಲಸದ ಒತ್ತಡದಿಂದ ತಮ್ಮಆರೋಗ್ಯದ ಕಡೆ ಕಾಳಜಿ ವಹಿಸುವುದನ್ನು ಮರೆಯಬಾರದು’ ಎಂದು ಶಾಸಕಪ್ರೀತಂ ಜೆ. ಗೌಡ ಹೇಳಿದರು.

ಜಿಲ್ಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಸರ್ಕಾರಿ ಮಹಿಳಾ ನೌಕರರಿಗೆಏರ್ಪಡಿಸಿದ್ದ ಆರೋಗ್ಯ ಕವಚ ಉಚಿತ ಸಮಗ್ರ ಮಹಿಳಾ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಎಲ್ಲಾ ಇಲಾಖೆಗಳ ಮಹಿಳಾ ನೌಕರರು ನೋಂದಾಯಿಸಿ, ತಪಾಸಣೆಗೆ ಒಳಪಟ್ಟು ತಮ್ಮ ಆರೋಗ್ಯ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬೇಕು. ಸಾಮಾನ್ಯ ಆರೋಗ್ಯ ಸಮಸ್ಯೆಗಳ ತಪಾಸಣೆ ಮತ್ತು ಪರಿಹಾರ, ಕಣ್ಣಿನ ಆರೋಗ್ಯ ಸಮಸ್ಯೆ ತಪಾಸಣೆ, ಉಚಿತ ರಕ್ತ ಪರೀಕ್ಷೆ, ಇಸಿಜಿ, ಗರ್ಭಕೊರಳಿನ ಕ್ಯಾನ್ಸರ್ ತಪಾಸಣೆ ಮತ್ತು ಔಷಧಿಗಳನ್ನು ನೀಡಲಾಗುತ್ತಿದೆ’ ಎಂದರು.

ADVERTISEMENT

ಗರ್ಭಕೋಶ, ಗರ್ಭಕೊರಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಇಸಿಜಿ, ಮಧುಮೇಹ, ರಕ್ತ ದೊತ್ತಡ ಸೇರಿದಂತೆ ಹತ್ತು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆಗೆ ಒಳಪಟ್ಟು, ಉಚಿತ ಔಷಧೋಪಚಾರ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.