ಬೇಲೂರು: ತಾಲ್ಲೂಕಿನ ಹಗರೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ತಾಯಿಮುದ್ದು ಕೃಷ್ಣಪ್ಪ ಆಯ್ಕೆಯಾದರು.
ಒಟ್ಟು 20 ಸದಸ್ಯ ಬಲ ಹೊಂದಿರುವ ಹಗರೆ ಗ್ರಾಮಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಪಡಿಸಲಾಗಿತ್ತು, ತಾಯಿಮುದ್ದು ಕೃಷ್ಣಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಸಂತಕುಮಾರ್ ಘೋಷಿಸಿದರು.
ಬಿಜೆಪಿ ಮುಖಂಡ ಡಿಶಾಂತಕುಮಾರ್ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಸಿಗಬೇಕು ಎಂಬುದು ಆಂಬೇಡ್ಕರ್ ಅವರ ಕನಸು, ಅದರಂತೆ ಹಗರೆ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರಾಗಿರುವ ಬುಡಕಟ್ಟು ಸಿಳ್ಳೆಕ್ಯಾತ ಸಮುದಾಯಕ್ಕೆ ಸೇರಿದ ಮಹಿಳೆ ತಾಯಿಮುದ್ದು ಕೃಷ್ಣಪ್ಪ ಸದಸ್ಯರ ಬೆಂಬಲದಿಂದ ಶಾಸಕ ಎಚ್.ಕೆ.ಸುರೇಶ್ ಮಾರ್ಗದರ್ಶನದಂತೆ ಅಧ್ಯಕ್ಷರಾಗಿದ್ದಾರೆ ಎಂದರು.
ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೋಳೆಯಯ್ಯ, ಸದಸ್ಯರಾದ ಮಂಜುನಾಥ್, ಪ್ರಭ ಮಹೇಶ್, ಪುಷ್ಪ ಹರೀಶ್, ಜಯಮ್ಮ ರಾಜ್ ಕುಮಾರ್, ಪಾಮತಿ ಅನಿಲ್, ಲಕ್ಷ್ಮಮ್ಮ , ಸವಾಸಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶೇಖರ್ ಗೌಡ, ಹಗರೆ ಕೃಷಿಪತ್ತಿನ ಸಹಕಾರ ಸಂಘದ ಸದಸ್ಯ ಸಂಕೇತ್, ಬಿಜೆಪಿ ಮುಖಂಡರಾದ ರಘು, ಗೋಪಿ, ಶ್ರೀನಿವಾಸ್, ಇಂತಿಯಾಜ್ ಖಾನ್ , ದರ್ಶನ್, ನವೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.