
ಪ್ರಜಾವಾಣಿ ವಾರ್ತೆ
ಪ್ರಾತಿನಿಧಿಕ ಚಿತ್ರ
ಹಾಸನ: ಅರಸೀಕೆರೆ ತಾಲ್ಲೂಕಿನ ಮಾದನಹಳ್ಳಿ ಗ್ರಾಮದ ಹರಿಹರೇಶ್ವರ ಸ್ವಾಮಿ ಮತ್ತು ರಾಮ–ಲಕ್ಷ್ಮಣ ದೇವಸ್ಥಾನದ ಹುಂಡಿಯನ್ನು ಒಡೆದು ನಗದು ಕಳವು ಮಾಡಲಾಗಿದೆ.
ಗ್ರಾಮದ ಕೊಟ್ಟೂರಪ್ಪ ಅವರು ಉಮಾಮಹೇಶ್ವರ ಅವರನ್ನು ಅರ್ಚಕರಾಗಿ ನೇಮಿಸಿದ್ದು, ಅರ್ಚಕರು ಜ.11 ರಂದು ಸಂಜೆ ಪೂಜೆ ಮುಗಿಸಿ ದೇವಸ್ಥಾನಗಳಿಗೆ ಬೀಗ ಹಾಕಿಕೊಂಡು ಮನೆಗೆ ಬಂದಿದ್ದರು. ಜ.12 ರಂದು ಬೆಳಿಗ್ಗೆ 5 ಗಂಟೆಗೆ ಧನುರ್ಮಾಸದ ಪೂಜೆಗೆ ದೇವಸ್ಥಾನದ ಬಳಿ ಬಂದಾಗ, ಹೋದಾಗ ರಾಮಲಕ್ಷ್ಮಣ ದೇವಸ್ಥಾನದ ಹುಂಡಿಯನ್ನು ಒಡೆದು, ಅದರಲ್ಲಿದ್ದ ₹3ಸಾವಿರ ನಗದು ಕಳವು ಮಾಡಲಾಗಿತ್ತು. ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.