ADVERTISEMENT

ಮನೆಯ ಆವರಣಕ್ಕೆ ಬಂದ ಕಾಳಿಂಗ ಸರ್ಪ: ಆತಂಕ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:19 IST
Last Updated 25 ಜೂನ್ 2025, 16:19 IST
ಸಕಲೇಶಪುರ ತಾಲ್ಲೂಕಿನ ದೇವಲದಕೆರೆ ಗ್ರಾಮದ ಮನೆಯ ಬಳಿ ಕಾಣಿಸಿಕೊಂಡ ಕಾಳಿಂಗ ಸರ್ಪ
ಸಕಲೇಶಪುರ ತಾಲ್ಲೂಕಿನ ದೇವಲದಕೆರೆ ಗ್ರಾಮದ ಮನೆಯ ಬಳಿ ಕಾಣಿಸಿಕೊಂಡ ಕಾಳಿಂಗ ಸರ್ಪ   

ಸಕಲೇಶಪುರ: ತಾಲ್ಲೂಕಿನ ದೇವಲದಕೆರೆ ಗ್ರಾಮದ ಮನೆಯ ಬಳಿಯೇ 12 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ನಿವಾಸಿಗಳು ಭಯಭೀತರಾಗಿದ್ದಾರೆ.

ಪ್ರಸನ್ನಕುಮಾರ್ ಅವರ ಮನೆಯ ಆವರಣದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ತಿಂಗಳಿನಲ್ಲಿ ಮೂರು ನಾಯಿಗಳನ್ನು ಕಚ್ಚಿ ಕೊಂದಿದೆ. ಕೆಲ ದಿನದ ಹಿಂದೆ ಕಾಳಿಂಗ ಸರ್ಪದ ಹಿಂದೆಯೇ ನಾಯಿಗಳು ಬೊಗಳುತ್ತಾ ಹೋಗಿದ್ದು, ಮೂರು ನಾಯಿಗಳನ್ನು ಕಾಳಿಂಗ ಸರ್ಪ ಕಾಫಿ ತೋಟದಲ್ಲಿ ಕಚ್ಚಿ ಸಾಯಿಸಿತ್ತು.

ಇದೀಗ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಇದರಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.