ADVERTISEMENT

ಕಾಂಗ್ರೆಸ್‌ ಮನಸ್ಥಿತಿ ಜನರಿಗೆ ಅರ್ಥವಾಗಿದೆ: ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಮೇ 2025, 14:16 IST
Last Updated 17 ಮೇ 2025, 14:16 IST
ಹಳೇಬೀಡು ಸಮೀಪದ ಪುಷ್ಪಗಿರಿ ಮಠಕ್ಕೆ ಭೇಟಿ ನೀಡಿದ ಛಲವಾದಿ ನಾರಾಯಣಸ್ವಾಮಿ ಅವರನ್ನು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.
ಹಳೇಬೀಡು ಸಮೀಪದ ಪುಷ್ಪಗಿರಿ ಮಠಕ್ಕೆ ಭೇಟಿ ನೀಡಿದ ಛಲವಾದಿ ನಾರಾಯಣಸ್ವಾಮಿ ಅವರನ್ನು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.   

ಹಾಸನ: ‘ನಮ್ಮ ದೇಶದವರಿಗೆ ಅನ್ಯಾಯ ಆಗಿದೆ. ಆ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಬೇಕಲ್ಲವೇ? ಆ ಕೆಲಸ ನಾವು ಮಾಡುತ್ತಿದ್ದೇವೆ. ಇದನ್ನು ವಿರೋಧ ಮಾಡುವ ಕಾಂಗ್ರೆಸ್‌ನ ಮನಸ್ಥಿತಿ ಏನು ಎನ್ನುವುದು ಜನರಿಗೆ ಅರ್ಥವಾಗಿದೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲಿ ಹಾಕಿದರೆ, ‘ಹೊರಗಡೆ ಇರುವ ಕಳ್ಳ ಒಳಗೆ ಬರುವುದಿಲ್ಲ. ಅಂದರೆ ಒಳಗಿರುವವನು ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತಾನೆ. ಈಗ ಹೊರಗಡೆ ನಡೆಯುತ್ತಿರುವ ಕಾರ್ಯಾಚರಣೆ ಒಳಗೂ ಆಗುತ್ತದೆ. ಸ್ವಲ್ಪ ಸಮಯ ಬೇಕಾಗುತ್ತದೆ’ ಎಂದರು.

‘ನಮ್ಮಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳು ಪಾಕಿಸ್ತಾನದಿಂದಲೇ ಆಗುತ್ತಿವೆ ಎನ್ನುವುದು ಸಾಬೀತಾಗಿದೆ. ಒಂಬತ್ತು ಸ್ಥಳಗಳಿಗೆ ನುಗ್ಗಿ ಹೊಡೆಯುವ ಕೆಲಸವನ್ನು ಮೋದಿ ಮಾಡಿದರು. ಪುಲ್ವಾಮದಲ್ಲಿ 48 ಸೈನಿಕರು ಸತ್ತಿದ್ದರು. ಪಾಕಿಸ್ತಾನದವರು ನಮಗೆ ಸಂಬಂಧ ಇಲ್ಲ ಎಂದು ಹೇಳಿದ್ದರು. ಈಗ ಏಕೆ ಒಪ್ಪಿಕೊಂಡರು’ ಎಂದು ಪ್ರಶ್ನಿಸಿದರು.

ADVERTISEMENT

‘ಕಾಶ್ಮೀರ, ಪಾಕಿಸ್ತಾನ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಗೊಂದಲ ಹುಟ್ಟುಹಾಕಿದ್ದೇ ಕಾಂಗ್ರೆಸ್‌ನವರು.  ಇಂದಿರಾಗಾಂಧಿ ಅವರನ್ನು ಬಹಳ ಹೊಗಳುತ್ತಾರೆ. 1971 ರಲ್ಲಿ ನಮ್ಮ ಮೇಲೆ ಯಾರೂ ಯುದ್ದಕ್ಕೆ ಬಂದಿರಲಿಲ್ಲ. ಪಾಕಿಸ್ತಾನ- ಬಾಂಗ್ಲಾದೇಶದ ನಡುವೆ ಯುದ್ಧ ನಡೆಯುತ್ತಿತ್ತು. ಒಬ್ಬನೇ ವೈರಿ ಇದ್ದವನನ್ನು ಇಬ್ಬರು ಮಾಡಿ, ನಮ್ಮ ಮೇಲೆ ಬಿಟ್ಟಿದ್ದೀರಿ. ಇದು ಕಾಂಗ್ರೆಸ್ ಮಾಡಿರುವ ದ್ರೋಹ. ಭಾರತದಲ್ಲಿ ಅನೇಕ ಸಮಸ್ಯೆಗಳು ಉದ್ಭವಾಗಿರುವುದು ಕಾಂಗ್ರೆಸ್‌ನಿಂದಲೇ. ನಾವು ಆ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಬೇಕಿದ್ದು, ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.