ಅರಕಲಗೂಡು: ತಾಲ್ಲೂಕಿನ ದುಮ್ಮಿ ಗ್ರಾಮದ ಶಕ್ತಿದೇವತೆ ಬಿಸಿಲು ಮಾರಮ್ಮ ದೇವರ ಉತ್ಸವ ಮಂಗಳವಾರ ಸಂಜೆ ಅದ್ದೂರಿಯಾಗಿ ಜರುಗಿತು.
ಮೂಲ ದೇವರ ಮೂರ್ತಿಯನ್ನು ರಾಮನಾಥಪುರದ ಕಾವೇರಿ ನದಿಗೆ ಕೊಂಡೊಯ್ದು ಗಂಗಾಸ್ನಾನ ಮಾಡಿಸಿದ ನಂತರ ಮೆರವಣಿಗೆ ಮೂಲಕ ಊರಿಗೆ ಕರೆತರಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತರು ಅಲಂಕೃತ ಅಡ್ಡೆ ಮೇಲೆ ದೇವರ ಮೂರ್ತಿ ಹೊತ್ತು ಉತ್ಸವದಲ್ಲಿ ಸಾಗಿ ಕುಣಿದು ಸಂಭ್ರಮಿಸಿದರು. ಉತ್ಸವಕ್ಕೆ ಭಕ್ತರು ಹಣ್ಣು ಕಾಯಿ ಅರ್ಪಿಸಿದರು. ದೇವಸ್ಥಾನದಲ್ಲಿ ಭಕ್ತರು ಪೂಜೆ ಸಲ್ಲಿಸಿ ಹರಕೆ ತೀರಿಸಿ ಭಕ್ತಿ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.