ADVERTISEMENT

ಗಿಡ ತಿಂದ ಹಸು ಕಟ್ಟಿದ್ದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 4:08 IST
Last Updated 13 ಜೂನ್ 2022, 4:08 IST
ಬೇಲೂರು ಪೊಲೀಸ್ ಠಾಣ ಆವರಣದಲ್ಲಿದ ಗಿಡಗಳನ್ನು ತಿಂದಿದ್ದಕ್ಕೆ ಪೊಲೀಸರು ಹಸು ಕಟ್ಟಿ ಹಾಕಿ ಬಿಡುಗಡೆ ಮಾಡಿದರು.
ಬೇಲೂರು ಪೊಲೀಸ್ ಠಾಣ ಆವರಣದಲ್ಲಿದ ಗಿಡಗಳನ್ನು ತಿಂದಿದ್ದಕ್ಕೆ ಪೊಲೀಸರು ಹಸು ಕಟ್ಟಿ ಹಾಕಿ ಬಿಡುಗಡೆ ಮಾಡಿದರು.   

ಬೇಲೂರು: ಇಲ್ಲಿನ ನೆಹರು ನಗರದ ಪೊಲೀಸ್ ಠಾಣೆ ಆವರಣದಲ್ಲಿದ್ದ ಗಿಡಗಳನ್ನು ತಿಂದ ಹಸುಗಳನ್ನು ಪೊಲೀಸರು ಕಟ್ಟಿಹಾಕಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.

‘ಹಸುಗಳು ಠಾಣೆ ಆವರಣದಲ್ಲಿದ ಗಿಡಗಳನ್ನು ಆಕಸ್ಮಾತಾಗಿ ತಿಂದಿವೆ. ಜೀವನೋಪಾಯಕ್ಕೆ ಆಧಾರವಾಗಿದ್ದ ಎರಡು ಹಸುಗಳನ್ನು ಕಟ್ಟಿಹಾಕಿ ಬಾಯಿಗೆ ಬಂದ ರೀತಿಯಲ್ಲಿ ಪೊಲೀಸರು ಬೈದರು. ರಾತ್ರಿ ಹಸುಗಳನ್ನು ಬಿಟ್ಟರು’ ಎಂದು ಹಸುಗಳ ಮಾಲೀಕರಾದ ನಿಂಗಮ್ಮ ಮತ್ತು ಸಿದ್ದಮ್ಮ ಆರೋಪಿಸಿದರು.

‘ಠಾಣೆ ಆವರಣದಲ್ಲಿ ಬೆಳೆಸಿದ್ದ ಗಿಡಗಳನ್ನು ಹಸುಗಳು ನಾಶಪಡಿಸಿವೆ. ಹಸುಗಳು ನಿತ್ಯ ಬರುತ್ತಿದ್ದವು, ಇಲ್ಲಿ ಬಿಡದಂತೆ ಹೇಳಿದರೂ ಕೇಳಿರ ಲಿಲ್ಲ ಆದ್ದರಿಂದ ಹಸುಗಳನ್ನು ಕಟ್ಟಿ ಹಾಕಲಾ ಗಿತ್ತು’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಎಂ.ಯೋಗೀಶ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.