
ಪ್ರಜಾವಾಣಿ ವಾರ್ತೆಪ್ರಾತಿನಿಧಿಕ ಚಿತ್ರ
ಚನ್ನರಾಯಪಟ್ಟಣ: ಪಟ್ಟಣದ ಹೊರವಲಯದ ಶೆಟ್ಟಿಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮ ದೇವತೆ ಶೆಟ್ಟಹಳಮ್ಮ ದೇಗುಲದ ಬೀಗವನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಒಳ್ಳನುಗ್ಗಿದ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಿದ್ದಾರೆ.
ದೇಗುಲದ ಬೀಗ ಮುರಿದು ಇಬ್ಬರು ಕಳ್ಳರು ಒಳನುಗ್ಗಿದ್ದಾರೆ. ಹುಂಡಿಯಲ್ಲಿರುವ ಹಣ ಕಳ್ಳತನ ಮಾಡುವ ದೃಶ್ಯ ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗರ್ಭಗುಡಿಯಲ್ಲಿ ಒಡವೆಗಳಿಗೆ ತಡಕಾಡಿದ್ದಾರೆ. ಆದರೆ ಏನು ಸಿಕ್ಕಿಲ್ಲ. ಈ ಹಿಂದೆ ದೇಗುಲದಲ್ಲಿ ಕಳ್ಳತನವಾಗಿದ್ದರಿಂದ ಗ್ರಾಮಸ್ಥರು ಇತ್ತೀಚೆಗೆ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿದ್ದರು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.