ಅರಕಲಗೂಡು: ತಾಲ್ಲೂಕು ಕೈಗಾರಿಕಾ ಕಸುಬುದಾರರ ವಿವಿಧೊದ್ದೇಶ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಲ್ಲೇಶಪ್ಪ ಹಾಗೂ ಉಪಾಧ್ಯಕ್ಷರಾಗಿ ಎ.ಜಿ.ರಾಮನಾಥ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ನವೀನ್, ನಿರ್ದೇಶಕರಾದ ಸುಬ್ಬೇಗೌಡ, ಚನ್ನಕೇಶವ ಶೆಟ್ಟಿ, ಎ.ಜಿ.ಭಾಸ್ಕರ್, ಎಂ.ಕೆ.ಶಿವಣ್ಣ, ಬಿ.ಜೆ.ನಾಗ, ರಂಗಸ್ವಾಮಿ, ಎ.ಜೆ.ಬಾಲು, ಪಿ.ಟಿ.ಕೇಶವೇಗೌಡ, ಸಿ.ಜಿ.ವೆಂಕಟೇಶ್, ಕಾರ್ಯದರ್ಶಿ ಯೋಗೇಂದ್ರ ದ್ವಿತೀಯ ದರ್ಜೆ ಸಹಾಯಕ ಸಿ.ಆರ್. ಕಾಂತ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.