ADVERTISEMENT

UPSC ಮುಖ್ಯ ಪರೀಕ್ಷೆ ಫಲಿತಾಂಶ: ‘ಸತತ ಪ್ರಯತ್ನ, ತಂದೆಯ ಮಾರ್ಗದರ್ಶನ’

​ಪ್ರಜಾವಾಣಿ ವಾರ್ತೆ
Published 30 ಮೇ 2022, 15:59 IST
Last Updated 30 ಮೇ 2022, 15:59 IST
ಬಿ.ಎಂ.ರವಿನಂದನ್‌455ನೇ ರ‍್ಯಾಂಕ್
ಬಿ.ಎಂ.ರವಿನಂದನ್‌455ನೇ ರ‍್ಯಾಂಕ್   

ಹಾಸನ: ಚನ್ನರಾಯಪಟ್ಟಣತಾಲ್ಲೂಕಿನ ಬಾಗೂರು ಗ್ರಾಮದ ಎಂಜಿನಿಯರಿಂಗ್ ಪದವೀಧರ ಬಿ.ಎಂ.ರವಿನಂದನ್‌ ಅವರು ಆರನೇ ಪ್ರಯತ್ನದಲ್ಲಿ 455ನೇ ರ‍್ಯಾಂಕ್ ಗಳಿಸಿದ್ದಾರೆ.

‘ಪರೀಕ್ಷೆ ಬರೆಯಲು ತಂದೆಯೇ ಮಾರ್ಗದರ್ಶನ ನೀಡಿದ್ದರು. ಐದು ಬಾರಿ ಪ್ರಯತ್ನಿಸಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಪ್ರಯತ್ನ ಬಿಡಲಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ಕೆನರಾ ಬ್ಯಾಂಕ್ ನೌಕರ ಬಿ.ಟಿ.ಮಂಜೇಗೌಡ, ಶುಶ್ರೂಷಕಿ ಪದ್ಮಾ ದಂಪತಿಯ ಮಗನಾದ ಅವರು, ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಪೂರೈಸಿದರು.

ADVERTISEMENT

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಸ್ನೇಹಿತರ ಜೊತೆ ಕೊಠಡಿಯಲ್ಲಿದ್ದುಕೊಂಡು ತಯಾರಿ ನಡೆಸಿದೆ. ದಿನಕ್ಕೆ 8 ತಾಸು ಅಧ್ಯಯನ ಮಾಡುತ್ತಿದ್ದೆ. ಐಪಿಎಸ್‌ ಹುದ್ದೆ ದೊರಕುವ ನಿರೀಕ್ಷೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.