
ಚನ್ನರಾಯಪಟ್ಟಣ: ದೀಕ್ಷೆ ನೀಡುವುದು, ಭೂಮಿಪೂಜೆ, ಧರ್ಮ ಸಂಸ್ಕಾರ, ಜನನ ಮತ್ತು ವಿವಾಹ ಸೇರಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅರ್ಚಕರ ಪಾತ್ರ ಮುಖ್ಯವಾದುದು ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಪುರೋಹಿತರ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪೂಜೆ, ಪುನಸ್ಕಾರಗಳನ್ನು ನಡೆಸಿಕೊಡುವ ಪುರೋಹಿತರ ಹಿತಕಾಪಾಡುವ ಮತ್ತು ಅವರ ಕಲ್ಯಾಣ ಸಾಧಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಸರ್ಕಾರ ನೀಡುವ ಹಣದಿಂದ ಅರ್ಚಕರು ಜೀವನ ನಡೆಸುವುದು ಕಷ್ಟ. ಲೋಕಕಲ್ಯಾಣಕ್ಕಾಗಿ ಪೂಜೆ ನೆರವೇರಿಸುವ ಪುರೋಹಿತರ ನೆರವಿಗೆ ಎಲ್ಲರು ಮುಂದಾಗಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಪರಮೇಶ್ ಮಾತನಾಡಿ, ಪುರೋಹಿತರು ಸಂಘಟಿತರಾಗಿ ಉತ್ತಮವಾಗಿ ಕೆಲಸ ಮಾಡಬೇಕು. ಅವರು ಮಾಡುವ ಪೂಜಾ ಕೈಂಕರ್ಯದಿಂದ ಜನರಲ್ಲಿ ನೆಮ್ಮದಿಯ ಭಾವಮೂಡುತ್ತದೆ ಎಂದು ತಿಳಿಸಿದರು.
ನುಗ್ಗೇಹಳ್ಳಿಯ ಪುರವರ್ಗಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್, ಕಾಂಗ್ರೆಸ್ ಮುಖಂಡ ಆನಂದ್‍ಗೌಡ ಮಾತನಾಡಿದರು.
ವೀರಶೈವಲಿಂಗಾಯತ ಪುರೋಹಿತರ ಸೇವಾ ಟ್ರಸ್ಟ್ ನೂತನ ಪದಾಧಿಕಾರಿಗಳು: ಗೌರವಾಧ್ಯಕ್ಷರು- ರೇಣುಕಾರಾಧ್ಯ, ಶಂಕರ್ ಪ್ರಸಾದ್. ಅಧ್ಯಕ್ಷ- ಸಿದ್ದೇಶ್ ಶಾಸ್ತ್ರಿ. ಉಪಾಧ್ಯಕ್ಷರು- ರುದ್ರೇಶ್, ಮಲ್ಲಿಕಾರ್ಜುನಸ್ವಾಮಿ. ಪ್ರಧಾನಕಾರ್ಯದರ್ಶಿ- ಸಾನಂದ್ ಶಾಸ್ತ್ರಿ. ಕಾರ್ಯದರ್ಶಿ- ರುದ್ರೇಶ್. ಖಜಾಂಚಿ-ಶಿವಾನಂದ್ ಶಾಸ್ತ್ರಿ. ಸಂಘಟನಾ ಕಾರ್ಯದರ್ಶಿ- ಹರೀಶ್. ಸಹಸಂಘಟನಾ ಕಾರ್ಯದರ್ಶಿ- ಶಶಿಕುಮಾರ್. ಸಂಚಾಲಕ-ವಿನಯಕುಮಾರ್.
ನಿರ್ದೇಶಕರು- ಕಿರಣ್, ಸಿದ್ದಲಿಂಗಾರಾಧ್ಯ, ಸಿದ್ದಲಿಂಗಸ್ವಾಮಿ, ವಿಶ್ವನಾಥ್, ನಾಗೇಶ್, ವೇದಮೂರ್ತಿ, ಕಾರ್ತಿಕ್, ಬಸವರಾಜು, ಸಂತೋಷ್, ಹರೀಶ್, ಶಶಿಕುಮಾರ್, ಮೋಹನ್‍ಕುಮಾರ್, ಉಮೇಶ್, ಎಚ್.ಎನ್. ಗಣೇಶ್ ಮೂರ್ತಿ, ಬಸವರಾಜು, ಮಧು ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.