ಹಳೇಬೀಡು: ಮಂಗಳವಾರ ಮುಂಜಾನೆ 4ರಿಂದ ಮಧ್ಯಾಹ್ನ 12ರವರೆಗೆ ಹಳೇಬೀಡಿನಲ್ಲಿ ನಿರಂತರವಾಗಿ ಮಳೆ ಸುರಿಯಿತು.
ಹೊಯ್ಸಳೇಶ್ವರ ದೇವಾಲಯದ ಹೊರ ಗೋಡೆಯ ಶಿಲ್ಪಕಲೆಯನ್ನು ಪ್ರವಾಸಿಗರು ಛತ್ರಿ ಹಿಡಿದು ವೀಕ್ಷಿಸಿದರು. ಬೆಳಿಗ್ಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. 10ರ ನಂತರ ಪ್ರವಾಸಿಗರು ಸಂಖ್ಯೆ ಎಂದಿನಂತೆ ಇತ್ತು. ತಮಿಳುನಾಡು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ನಿರಂತರ ಮಳೆ ಸುರಿದಿದ್ದರಿಂದ ಹೋಯ್ಸಳೇಶ್ವರ ದೇವಾಲಯ, ಬೇಲೂರು ರಸ್ತೆ ಪೇಟೆ ಬೀದಿಗಳಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಮಧ್ಯಾಹ್ನ 1ರ ನಂತರ ಮಳೆ ಬಿಡುವು ಕೊಟ್ಟಿದ್ದರಿಂದ ಜನರ ಓಡಾಟ ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.