ADVERTISEMENT

ವಾಲಿಬಾಲ್ ಟೂರ್ನಿ: ಹಾಸನ ಕಾಲೇಜು ತಂಡ ಪ್ರಥಮ

ಮೈಸೂರು ವಿವಿ ಮಲೆನಾಡು ವಲಯ ಪುರುಷರ ವಾಲಿಬಾಲ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 13:28 IST
Last Updated 12 ಏಪ್ರಿಲ್ 2025, 13:28 IST
<div class="paragraphs"><p>ಚನ್ನರಾಯಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೈಸೂರು ವಿಶ್ವವಿದ್ಯಾಲಯ ಮಲೆನಾಡು ವಲಯ ಅಂತರ ಕಾಲೇಜು ವಾಲಿಬಾಲ್ ಟೂರ್ನಿಯಲ್ಲಿ ಪ್ರಥಮಸ್ಥಾನ ಗಳಿಸಿದ ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ತಂಡಕ್ಕೆ ದೈಹಿಕ ಶಿಕ್ಷಣ ನಿರ್ದೇಶಕ ಸಿ. ಪ್ರಕಾಶ್‍ಕುಮಾರ್, ಜೆ. ಭಾಸ್ಕರ್ ಬಹುಮಾನ ವಿತರಿಸಿದರು. </p></div>

ಚನ್ನರಾಯಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೈಸೂರು ವಿಶ್ವವಿದ್ಯಾಲಯ ಮಲೆನಾಡು ವಲಯ ಅಂತರ ಕಾಲೇಜು ವಾಲಿಬಾಲ್ ಟೂರ್ನಿಯಲ್ಲಿ ಪ್ರಥಮಸ್ಥಾನ ಗಳಿಸಿದ ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ತಂಡಕ್ಕೆ ದೈಹಿಕ ಶಿಕ್ಷಣ ನಿರ್ದೇಶಕ ಸಿ. ಪ್ರಕಾಶ್‍ಕುಮಾರ್, ಜೆ. ಭಾಸ್ಕರ್ ಬಹುಮಾನ ವಿತರಿಸಿದರು.

   

ಚನ್ನರಾಯಪಟ್ಟಣ : ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೈಸೂರು ವಿಶ್ವವಿದ್ಯಾಲಯ ಮಲೆನಾಡುವಲಯ ಅಂತರ ಕಾಲೇಜುಗಳ ಪುರುಷರ ವಿಭಾಗದ ವಾಲಿಬಾಲ್ ಟೂರ್ನಿಯಲ್ಲಿ ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ತಂಡ ಪ್ರಥಮ ಸ್ಥಾನಗಳಿಸಿತು.

ಚನ್ನರಾಯಪಟ್ಟಣದ ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜು ತಂಡ ದ್ವಿತೀಯ, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ತೃತೀಯ ಸ್ಥಾನಗಳಿಸಿದವು.

ಪ್ರಥಮ ಸ್ಥಾನಗಳಿಸಿದ ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ತಂಡವನ್ನು ಕುಶಾಲ್, ಜೇಮ್ಸ್ ಜಾಯ್, ಕಿರಣ್ ಆಂಟೋನಿ, ಕೆ.ಎಸ್. ದರ್ಶನ್, ಡಿ.ಕೆ. ಮಂಜು, ಎಂ.ಆರ್. ಸಂಜಯ್, ಎ.ಜೆ. ಸಂಜಯ್, ಎಸ್.ವೈ. ಭರತ್, ಎನ್.ಎಚ್. ಅಮೃತ್, ಎನ್.ಪಿ. ಸಂತೋಷ್ ಪ್ರತಿನಿಧಿಸಿದ್ದರು ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜೆ.ಕೆ. ಪವನ್ ತಿಳಿಸಿದರು.

ಟೂರ್ನಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದ ಎರಡು ತಂಡಗಳು ಮೈಸೂರು ನಗರದಲ್ಲಿ ಇದೇ ತಿಂಗಳು 22 ಮತ್ತು 23ರಂದು ಜರುಗುವ ಮೈಸೂರು ವಿಶ್ವವಿದ್ಯಾಲಯ ಅಂತರಕಾಲೇಜು, ಅಂತರವಲಯ ಟೂರ್ನಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿವೆ.

ADVERTISEMENT

ಚನ್ನರಾಯಪಟ್ಟಣದ ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಟೂರ್ನಿ ಆಯೋಜಿಸಲಾಗಿತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಸಿ. ಪ್ರಕಾಶ್‍ಕುಮಾರ್ ಮಾತನಾಡಿ, ಕ್ರೀಡೆಗಳಿಂದ ಉತ್ತಮ ಆರೋಗ್ಯದ ಜತೆಗೆ,  ರಾಷ್ಟ್ರಮಟ್ಟದ ಸಾಧನೆ ಮಾಡಿದರೆ ಶಿಕ್ಷಣ, ಉದ್ಯೋಗ ಅವಕಾಶ ಲಭಿಸುತ್ತದೆ ಎಂದರು.

ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಕೆ. ಮಂಜುನಾಥ, ಮೈಸೂರು ವಿಶ್ವವಿದ್ಯಾಲಯ ಮಲೆನಾಡು ವಲಯದ ದೈಹಿಕ ಶಿಕ್ಷಣ ನಿರ್ದೇಶಕ ಸಿ. ಮುರಳಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜೆ. ಭಾಸ್ಕರ, ಸಹಾಯಕ ಪ್ರಾಧ್ಯಾಪಕರಾದ ನಿಂಗರಾಜು, ಎ.ಎನ್. ಶ್ರೀಧರ್, ಪಿ. ನರಸಿಂಹಮೂರ್ತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.