ADVERTISEMENT

ಶ್ರೀಮಂತಿಕೆ, ಅಧಿಕಾರ ತಲೆಗೆ ಏರದಿರಲಿ: ಶಂಭುನಾಥ ಸ್ವಾಮೀಜಿ

ದೇವಾಂಗ ಸಮುದಾಯದ ಸನ್ಮಾನ ಕಾರ್ಯಕ್ರಮದಲ್ಲಿ ಶಂಭುನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 5:23 IST
Last Updated 7 ಸೆಪ್ಟೆಂಬರ್ 2025, 5:23 IST
ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶನಿವಾರ ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ದೇವಾಂಗ ನೌಕರರು ಹಾಗೂ ಸಾಧಕರನ್ನು ಗೌರವಿಸಲಾಯಿತು.
ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶನಿವಾರ ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ದೇವಾಂಗ ನೌಕರರು ಹಾಗೂ ಸಾಧಕರನ್ನು ಗೌರವಿಸಲಾಯಿತು.   

ಹಾಸನ: ಶ್ರೀಮಂತಿಕೆ ಹಾಗೂ ಅಧಿಕಾರದ ಬಲ ಹೃದಯದಲ್ಲಿ ಇರಬೇಕು. ಅದನ್ನು ತಲೆಗೆ ಏರಿಸಿಕೊಂಡರೆ, ಅಂಥವರ ವಿನಾಶ ಖಂಡಿತ. ಎಷ್ಟೇ ಶ್ರೀಮಂತಿಕೆ ಮತ್ತು ಉನ್ನತ ಅಧಿಕಾರ ಇದ್ದರೂ ಹೃದಯವಂತಿಕೆ ಇರಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.

ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಹಾಸನ ಜಿಲ್ಲಾ ದೇವಾಂಗ ನೌಕರರ ಸಂಘ ಶನಿವಾರ ಆಯೋಜಿಸಿದ್ದ ದೇವಾಂಗ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ನಿವೃತ್ತ ದೇವಾಂಗ ನೌಕರರು, ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಗವಂತ ಕೊಟ್ಟಿರುವ ಜ್ಞಾನದ ಬೆಳಕನ್ನು ಸದುಪಯೋಗ ಪಡಿಸಿಕೊಂಡು, ಅವಕಾಶ ಬಳಸಿಕೊಳ್ಳುತ್ತಾ, ಉನ್ನತ್ತ ಸ್ಥಾನಕ್ಕೆ ಏರಿದಾಗ ಯಾವುದೇ ಮೀಸಲಾತಿ ಬೇಕಿಲ್ಲ. ಕಲಿಕೆಗೆ ಹೆಚ್ಚಿನ ಮಹತ್ವ ನೀಡಿ. ಇನ್ನೂ ಹೆಚ್ಚಿನ ಪುರಸ್ಕಾರ ಪಡೆಯುತ್ತ ಸಮಾಜಕ್ಕೆ ಬೆಳಕಾಗಿ ಬೆಳೆಯಿರಿ ಆಶಿಸಿದರು.

ADVERTISEMENT

ವಚನಕಾರ ದೇವರ ದಾಸಿಮಯ್ಯ 11ನೇ ಶತಮಾನದಲ್ಲಿ ನೇಕಾರ ವೃತ್ತಿ ಮಾಡುತ್ತ ವಚನಗಳನ್ನು ರಚಿಸಿದರು. ಅವರಲ್ಲಿದ್ದ ವಿಶೇಷ ದೈವಿಗುಣದಿಂದ ಈಶ್ವರನಿಗೆ ಅನ್ನದಾಸೋಹ ನೀಡಿದ ಪೂಜ್ಯನೀಯರು. ಇಂದು ಮನೆಗಳಲ್ಲಿ ಹಲವು ದೇವರ ಫೋಟೊ ನೋಡಿದ್ದೇವೆ. ಅದೇ ರೀತಿ ದೇವರ ದಾಸಿಮ್ಮಯ್ಯ ಅವರ ಫೋಟೊ ದೇವಾಂಗ ಸಮುದಾಯದವರ ಮನೆಯಲ್ಲಿ ಇರಲಿ. ಅವರಿಗೊಂದು ಪೂಜೆಯೂ ಇರಲಿ ಎಂದು ಸಲಹೆ ನೀಡಿದರು.

ಹಂಪಿ ಹೇಮಕೂಟದ ದಯಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಭಾವಂತ ವಿದ್ಯಾರ್ಥಿಗಳು, ನಿವೃತ್ತ ನೌಕರರು, ಸಾಧಕರಿಗೆ ಶುಭ ಹಾರೈಸಿದರು. ಅಬಕಾರಿ ಇಲಾಖೆ ಮಡಿಕೇರಿಯ ಉಪ ಆಯುಕ್ತ, ದೇವಾಂಗ ನೌಕರರ ಸಂಘದ ಅಧ್ಯಕ್ಷ ಡಿ. ನಾಗೇಶ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಜಿ.ಆರ್.ಮಂಜೇಶ್, ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಬಿ.ಸೋಮಶೇಖರ್, ದೇವಾಂಗ ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಇತರರು ಮಾತನಾಡಿದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್, ಹಾಸನ ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷ ಡಾ.ಬಿ.ಎಂ.ವಿಜಯ್, ಗೌರವಾಧ್ಯಕ್ಷ ಜಿ.ಎಸ್.ಸತೀಶ್, ಲೆಕ್ಕ ಪರಿಶೋಧಕ ಜಲೇಂದ್ರ, ಡಾ.ರಾಜೇಶ್, ವಕೀಲರಾದ ಎಲ್. ಪುರುಷೋತ್ತಮ್, ಶಂಕರಶೆಟ್ಟಿ, ತ್ಯಾಗರಾಜ್, ಕವಿತಾ, ಎ.ಎಚ್.ಉಮೇಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.