ADVERTISEMENT

ಬೇಲೂರು: ಕಾಡುಹಂದಿ ದಾಳಿ- ಅಪಾರ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 4:18 IST
Last Updated 11 ಆಗಸ್ಟ್ 2021, 4:18 IST
ಹಂದಿ ದಾಳಿಗೆ ಹಾಳಾದ ಮುಸುಕಿನ ಜೋಳ ತೋರಿಸಿದ ರೈತ
ಹಂದಿ ದಾಳಿಗೆ ಹಾಳಾದ ಮುಸುಕಿನ ಜೋಳ ತೋರಿಸಿದ ರೈತ   

ಬೇಲೂರು: ತಾಲ್ಲೂಕಿನ ಹೆಬ್ಬಾಳು ಗ್ರಾಮದಲ್ಲಿ ತೆನೆ ಹೊರಟಿದ್ದ ಮುಸುಕಿನ ಜೋಳದ ಬೆಳೆಯನ್ನು ಕಾಡು ಹಂದಿಗಳು ಸೋಮವಾರ ರಾತ್ರಿ ನಾಶಪಡಿಸಿವೆ.

ಹೆಬ್ಬಾಳು ಗ್ರಾಮದ ಯೋಗೇಶ್ ಎರಡು ಎಕರೆ ಜಮೀನಿನಲ್ಲಿ ಬೆಳೆದ ಜೋಳದ ತೆನೆಗಳನ್ನು ತಿಂದು, ತುಳಿದು ಹಾಳುಮಾಡಿವೆ.

‘ಸಾಲ ಮಾಡಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂ ತಾಗಿದೆ, ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಹಂದಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಹಾಗೂ ನಾಶವಾಗಿರು ಬೆಳೆಗೆ ಪರಿಹಾರ ನೀಡಬೇಕು’ ಎಂದು ರೈತ ಯೋಗೇಶ್ ಆಗ್ರಹಿಸಿದ್ದಾರೆ.

ADVERTISEMENT

ರೈತ ಸಂಘದ ಹಿರಿಯ ಮುಖಂಡ ಅಣ್ಣೇಗೌಡ ಮಾತನಾಡಿ, ‘ಪ್ರತಿವರ್ಷ ಮುಸುಕಿನ ಜೋಳದ ಬೆಳೆಯು ಕಾಡು ಹಂದಿಗಳ ದಾಳಿಗೆ ಸಿಲುಕಿ ಹಾಳಾಗುತ್ತಿದೆ. ಈ ವಿಷಯವನ್ನು ಸಾಕಷ್ಟು ಭಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ, ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದಿದ್ದರೆ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.