ADVERTISEMENT

ಹಾಸನ: ಗಾಳಿ ಸಹಿತ ಜೋರು ಮಳೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 14:33 IST
Last Updated 4 ಸೆಪ್ಟೆಂಬರ್ 2020, 14:33 IST

ಹಾಸನ: ನಗರ ಸೇರಿ ಜಿಲ್ಲಾದಾದ್ಯಂತ ಮೂರು ದಿನಗಳಿಂದ ಗಾಳಿ ಸಹಿತ ಜೋರು ಸುರಿಯುತ್ತಿದೆ.

ಅರಸೀಕೆರೆ ತಾಲ್ಲೂಕಿನ ಬಾಣವಾರ, ಆಲೂರು, ಅರಕಲಗೂಡು ತಾಲ್ಲೂಕಿನ ರಾಮನಾಥಪುರ, ಕಸಬಾ, ಬಸವಾಪಟ್ಟಣದಲ್ಲಿ ರಭಸದ ಮಳೆಯಾಗಿದೆ. ಗುರುವಾರ ರಾತ್ರಿ ಮತ್ತು ಶುಕ್ರವಾರ ಸಂಜೆ ಉತ್ತಮ ಮಳೆಯಾಗಿದೆ.

ಮಳೆಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ರಂಗೋಲಿಹಳ್ಳಿ, ಪೆನ್ಷನ್‌ ಮೊಹಲ್ಲಾದ ಇಳಿಜಾರು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಯಲ್ಲಿ ಸುರಿದ ಹೋಬಳಿವಾರು ಮಳೆ ವಿವರ.

ADVERTISEMENT

ಹಾಸನ ತಾಲ್ಲೂಕಿನ ಕಟ್ಟಾಯ 11.3 ಮಿ.ಮೀ., ಹಾಸನ 0.8 ಮಿ.ಮೀ., ದುದ್ದ 5.6 ಮಿ.ಮೀ., ಶಾಂತಿಗ್ರಾಮ 5 ಮಿ.ಮೀ., ಗೊರೂರು 46.2 ಮಿ.ಮೀ., ಸಾಲಗಾಮೆ 36 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ 3.3 ಮಿ.ಮೀ., ಹೊಸೂರು 12 ಮಿ.ಮೀ., ಶುಕ್ರವಾರಸಂತೆ 7.2 ಮಿ.ಮೀ., ಹಾನುಬಾಳು 1.4 ಮಿ.ಮೀ., ಹೆತ್ತೂರು 10.3 ಮಿ.ಮೀ., ಬೆಳಗೋಡು 2 ಮಿ.ಮೀ., ಬಾಳ್ಳುಪೇಟೆ 8.3 ಮಿ.ಮೀ. ಸಕಲೇಶಪುರ 4.2 ಮಿ.ಮೀ. ಮಳೆ ಸುರಿದಿದೆ.

ಅರಸೀಕೆರೆ ತಾಲ್ಲೂಕಿನ ಗಂಡಸಿ 20.8 ಮಿ.ಮೀ., ಕಸಬಾ 15 ಮಿ.ಮೀ., ಕಣಕಟ್ಟೆ 8.4 ಮಿ.ಮೀ., ಯಳವಾರೆ 15.2 ಮಿ.ಮೀ., ಜಾವಗಲ್ 1 ಮಿ.ಮೀ., ಬಾಣವಾರ 70 ಮಿ.ಮೀ. ಮಳೆ ಆಗಿದೆ.

ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 4.6 ಮಿ.ಮೀ., ಹಳ್ಳಿ ಮೈಸೂರು 2.2 ಮಿ.ಮೀ,ಆಲೂರು ತಾಲ್ಲೂಕಿನ ಕುಂದೂರಿನಲ್ಲಿ 17.6 ಮಿ.ಮೀ., ಕೆ.ಹೊಸಕೋಟೆ 7.4 ಮಿ.ಮೀ., ಆಲೂರಿನಲ್ಲಿ 23 ಮಿ.ಮೀ. ಮಳೆಯಾಗಿದೆ.

ಅರಕಲಗೂಡು ತಾಲ್ಲೂಕಿನ ಕಸಬಾ 50.6 ಮಿ.ಮೀ., ರಾಮನಾಥಪುರ 50.1 ಮಿ.ಮೀ., ಬಸವಾಪಟ್ಟಣ 48.2 ಮಿ.ಮೀ., ದೊಡ್ಡಮಗ್ಗೆ 11.2 ಮಿ.ಮೀ., ಮಲ್ಲಿಪಟ್ಟಣ 2 ಮಿ.ಮೀ., ದೊಡ್ಡಬೆಮ್ಮತ್ತಿ 6.2 ಮಿ.ಮೀ., ಕೊಣನೂರು 20.2 ಮಿ.ಮೀ. ಮಳೆಆಗಿದೆ.

ಬೇಲೂರು ತಾಲ್ಲೂಕಿನ ಹಗರೆಯಲ್ಲಿ 11.4 ಮಿ.ಮೀ., ಹಳೆಬೀಡು 2.8 ಮಿ.ಮೀ., ಅರೆಹಳ್ಳಿ 4 ಮಿ.ಮೀ., ಬಿಕ್ಕೋಡು 2 ಮಿ.ಮೀ., ಗೆಂಡೆಹಳ್ಳಿ 10.2 ಮಿ.ಮೀ., ಬೇಲೂರು 1.6 ಮಿ.ಮೀ.,ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 13.4 ಮಿ.ಮೀ., ಉದಯಪುರ 37 ಮಿ.ಮೀ., ಬಾಗೂರು 26.2 ಮಿ.ಮೀ., ಶ್ರವಣಬೆಳಗೊಳ 10.4 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.