ADVERTISEMENT

ಅಕ್ರಮ ತಡೆಗೆ ವಿಚಕ್ಷಣಾ ದಳ ರಚನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 9:05 IST
Last Updated 6 ಮಾರ್ಚ್ 2011, 9:05 IST

ಹಾವೇರಿ: ಪದವಿ ಪೂರ್ವ ಕಾಲೇಜುಗಳ ಪಿ.ಯು.ಸಿ. ದ್ವಿತೀಯ ಹಾಗೂ ಜೆ.ಓ.ಸಿ. ಪರೀಕ್ಷೆ ಮಾ. 17ರಿಂದ 30ರವರೆಗೆ ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಅಕ್ರಮಗಳ ತಡೆಗೆ ಜಿಲ್ಲಾ ಹಾಗೂ ಮಟ್ಟದಲ್ಲಿ ಐದು ವಿಚಕ್ಷಣಾ ಹಾಗೂ ಜಾಗೃತ ದಳ ರಚಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತಲ್ಲದೇ, ಶಾಂತಿ, ಸುವ್ಯವಸ್ಥೆ ಹಾಗೂ ಸೂಕ್ತ ಭದ್ರತಾ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು.

ಕಳೆದ ವರ್ಷದಿಂದ ಪಿ.ಯು.ಸಿ. ದ್ವಿತೀಯ ಪರೀಕ್ಷೆಗೂ ಪ್ರಶ್ನೆ ಪತ್ರಿಕೆ ಓದಲು ಹೆಚ್ಚುವರಿಯಾಗಿ 15 ನಿಮಿಷ ನೀಡುತ್ತಿದ್ದು, ಈ ಅವಧಿ ಪೂರ್ಣಗೊಂಡ ನಂತರವೇ ಉತ್ತರ ಪತ್ರಿಕೆಗಳನ್ನು ವಿತರಿಸಲಾಗುವುದು. ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾ ಮಟ್ಟದಲ್ಲಿ ಐದು ವಿಚಕ್ಷಣಾ ದಳಗಳನ್ನು ರಚಿಸಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ಇದೇ ಮಾದರಿಯಲ್ಲಿ ಜಾಗೃತ ದಳಗಳನ್ನು ರಚಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಎಚ್.ಮಟ್ಟೂರ ತಿಳಿಸಿದರು.

ADVERTISEMENT

ಪರೀಕ್ಷೆ ಆರಂಭವಾದ ನಂತರ ನೀರು ಪೂರೈಸುವ ಹುಡುಗನನ್ನು ಹೊರತುಪಡಿಸಿ ಪರೀಕ್ಷೆಗೆ ಸಂಬಂಧಿಸದ ಯಾರೊಬ್ಬರೂ ಪರೀಕ್ಷಾ ಕೊಠಡಿಗೆ ಪ್ರವೇಶಿಸದಂತೆ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಪರೀಕ್ಷಾ ಕೇಂದ್ರದ ಅಧೀಕ್ಷಕರ ಮೇಲೆ ಕ್ರಮ ಕೈಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಪರೀಕ್ಷೆ ಜರುಗುವ ಕೇಂದ್ರಗಳ ಸುತ್ತ ಪರೀಕ್ಷಾ ಸಮಯದಲ್ಲಿ ನಿಷೇಧಾಜ್ಞೆ (144ನೇ ಕಲಂ) ಜಾರಿ ಮಾಡುತ್ತಿದ್ದು, ಹತ್ತಿರದ ಝೆರಾಕ್ಸ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚಲು ಕ್ರಮ ಕೈಕೊಳ್ಳಲಾಗುವುದಲ್ಲದೇ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದ ಯಾವುದೇ ಅಧಿಕಾರಿ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು  ಪರೀಕ್ಷಾ ದ್ರಕ್ಕೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಪರೀಕ್ಷೆ ವೇಳೆ ಎಲ್ಲ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದೆಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎಂ. ಅಗಡಿ ಭರವಸೆ ನೀಡಿದರು.

ಜೆ.ಓ.ಸಿ. ಪರೀಕ್ಷೆ: ಜಿಲ್ಲೆಯ 7 ಕಡೆಗಳಲ್ಲಿ ಜೆ.ಓ.ಸಿ. (ವೃತ್ತಿ ಶಿಕ್ಷಣ) ಪರೀಕ್ಷೆ ಸಹ ಜರುಗಲಿದ್ದು, ಬೆಳಿಗ್ಗೆ ಪಿ.ಯು.ಸಿ ಪರೀಕ್ಷೆ, 9ರಿಂದ 12.15ರವರೆಗೆ ನಡೆದರೆ, ಜೆ.ಓ.ಸಿ. ಪರೀಕ್ಷೆಗಳು ಮಧ್ಯಾಹ್ನ 2 ರಿಂದ 5.15ರವರೆಗೆ ಜರುಗಲಿವೆ ಎಂದು ಎ.ಎಚ್.ಮಟ್ಟೂರ ಸಭೆಗೆ ತಿಳಿಸಿದರು. ಸಭೆಯಲಿ ್ಲಜಿಲೆಯ್ಲ ಪರೀಕ್ಷಾ ಕೇಂದ್ರಗಳ ಅಧೀಕ್ಷಕರು, ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಾಲ್ಗೊಂಡಿದ್ದರು.

ಪಿ.ಯು.ಸಿ. ಪರೀಕ್ಷಾ ಕೇಂದ್ರಗಳುಃ  ರಾಣೆಬೆನ್ನೂರಿನ ಬಿ.ಕೆ. ಗುಪ್ತಾ ಪದವಿ ಪೂರ್ವ ಕಾಲೇಜು, ಬ್ಯಾಡಗಿಯ ಸರ್ಕಾರಿ ಎಸ್.ಜೆ.ಎಂ. ಪದವಿ ಪೂರ್ವ ಕಾಲೇಜು, ಹಾವೇರಿಯ ಜಿ.ಎಚ್. ಪದವಿ ಪೂರ್ವ ಕಾಲೇಜು, ಎಸ್.ಜೆ.ಎಂ. ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಎಸ್.ಎಂ.ಎಸ್. ಬಾಲಕಿಯರ ಪದವಿ ಪೂರ್ವ ಕಾಲೇಜು, ರಟ್ಟೀಹಳ್ಳಿಯ ಎಸ್.ಕೆ. ಪದವಿ ಪೂರ್ವ ಕಾಲೇಜು, ಹಿರೇಕೆರೂರಿನ ಸಿ.ಇ.ಎಸ್. ಪದವಿ ಪೂರ್ವ ಕಾಲೇಜು, ಕೋಡದ ಮಾರುತಿ ಪದವಿ ಪೂರ್ವ ಕಾಲೇಜು, ಮಾಸೂರಿನ ಬಿ.ಟಿ. ಪಾಟೀಲ್ ಪದವಿ ಪೂರ್ವ ಕಾಲೇಜು, ಹಿರೇಕೆರೂರಿನ ಸಂಗಮೇಶ್ವರ ಪದವಿ ಪೂರ್ವ ಕಾಲೇಜು, ಹಂಸಭಾವಿಯ ಎಂ.ಎ.ಎಸ್.ಸಿ ಪದವಿ ಪೂರ್ವ ಕಾಲೇಜು, ರಾಣೆಬೆನ್ನೂರಿನ ಆರ್.ಟಿ.ಇ.ಎಸ್. ಪದವಿ ಪೂರ್ವ ಕಾಲೇಜು ಹಾಗೂ ಎಚ್.ಎಸ್. ಪದವಿ ಪೂರ್ವ ಕಾಲೇಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.