ADVERTISEMENT

ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 9:20 IST
Last Updated 1 ಅಕ್ಟೋಬರ್ 2011, 9:20 IST

ಬ್ಯಾಡಗಿ: ಅಕ್ರಮ ಮದ್ಯ ಮಾರಾಟವನ್ನು ಸ್ಥಗಿತಗೊಳಿಸುವಂತೆ ತಾಲ್ಲೂಕಿನ ತಿಮಕಾಪುರ ಗ್ರಾಮದ ಮಹಿಳೆಯರು ಶುಕ್ರವಾರ ತಹಶಿಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
 
ತಹಸೀಲ್ದಾರ ಕಾರ್ಯಾಲಯದ ಎದುರಿಗೆ ಧರಣಿ ನಡೆಸಿದ ಈ ಸಂದರ್ಭದಲ್ಲಿ ಮಾತ ನಾಡಿದ ಗ್ರಾಮದ ಮುಖಂಡ ಎಂ.ಡಿ. ಕಡೇಮನಿ ಮದ್ಯದ ದುಶ್ಚಟಕ್ಕೆ ಯುವ ಕರೆ ಬಲಿಯಾಗುತ್ತಿದ್ದು, ಕುಟುಂಬ ನಿರ್ವ ಹಣೆ ಸಹಿತ ದುಸ್ತರವಾಗಿದೆ. ಗ್ರಾಮ ದಲ್ಲಿ ಮಾರಾಟವಾಗುವ ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಆಗ್ರಹಿಸಿದರು.

ಧರಣಿಯಲ್ಲಿ ಮುಖಂಡ ಬಿ.ಬಿ.ಬಂಗೇರ, ಹನುಮಂತಪ್ಪ ನರಸಣ್ಣನವರ, ರಾಮಣ್ಣ ದೇವಗೇರಿ, ಸಂಜೀವ ಕಳ ಗೊಂಡ, ರೇಣುಕಾ ಮಟ್ಟಿಮನಿ, ಪುಟ್ಟವ್ವ ಕಳಗೊಂಡ, ಕೆಂಚವ್ವ ಹರಿಜನ, ವಿಶಾಲಾಕ್ಷಿ ಅಂಗರಗಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಎನ್‌ಎಸ್‌ಎಸ್ ಶಿಬಿರ: ತಾಲ್ಲೂಕಿನ ಮೋಟೆಬೆನ್ನೂರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಸಕ್ತ ವರ್ಷದ ರಾಷ್ಟ್ರೀಯ ಸೇವಾ ಯೋಜ ನೆಯ ವಿಶೇಷ ಶಿಬಿರವನ್ನು ತಾಲ್ಲೂಕಿನ ಕೆಂಗೊಂಡ ಗ್ರಾಮದಲ್ಲಿ ಅ.2 ರಿಂದ 7 ದಿನಗಳವರೆಗೆ ಆಯೋಜಿಸಿದೆ.

ಮೊದಲ ದಿನದ ಕಾರ್ಯಕ್ರಮವನ್ನು ಶಾಸಕ ಸುರೇಶಗೌಡ್ರ ಪಾಟೀಲ ಉದ್ಘಾ ಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಜಿಲ್ಲಾ ಪಂಚಾಯಿತಿ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಎಪಿಎಂಸಿ ಉಪಾಧ್ಯಕ್ಷ ಹಾಲೇಶಪ್ಪ ಬ್ಯಾಡಗಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾಗರಾಜ ಬಳ್ಳಾರಿ ಹಾಗೂ ಕಮಲವ್ವ ಲಮಾಣಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತಮ್ಮ ನೇಕಾರ, ಭೂದಾನಿಗಳಾದ ಚನ್ನವೀರಪ್ಪ ಬಳ್ಳಾರಿ, ಕಾಲೇಜು ಅಭಿ ವೃದ್ದಿ ಸಮಿತಿ ಉಪಾಧ್ಯಕ್ಷ ಶಿವಬಸಪ್ಪ ಕುಳೇನೂರ, ಎಸ್.ಡಿ.ಹಾವನೂರ, ನಾಗರಾಜ ಹಾವನೂರ ಹಾಗೂ ಇನ್ನಿತರರು ಪಾಲ್ಗೊಳ್ಳುವರು.

ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ನಿಂಗಪ್ಪ ದೇವರಗುಡ್ಡ ವಹಿಸುವ ಎಂದು ಪ್ರಾಚಾರ್ಯ ಎನ್.ಎಸ್.ಚೂರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.