ADVERTISEMENT

ಆಣೆ, ಪ್ರಮಾಣ: ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 6:10 IST
Last Updated 21 ಜೂನ್ 2011, 6:10 IST

ಹಾವೇರಿ:  `ಮತ್ತೊಬ್ಬರ ಮೇಲೆ ಸುಳ್ಳು ಆಪಾದನೆ ಮಾಡಿ ರಾಜಕಾರಣ ಮಾಡುವುದನ್ನು ನಿಲ್ಲಿಸುವ ಉದ್ದೇಶ ದಿಂದ ಮುಖ್ಯಮಂತ್ರಿಗಳು ಧರ್ಮಸ್ಥಳ ಮಂಜುನಾಥನ ಎದುರು ಆಣೆ, ಪ್ರಮಾಣ ಮಾಡುವ ಕ್ರಮಕ್ಕೆ  ಮುಂದಾಗಿದ್ದಾರೆ~ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಮುಖ್ಯಮಂತ್ರಿ ಗಳ ಆಣೆ, ಪ್ರಮಾಣ ಮಾಡುವುದನ್ನು ಸಮರ್ಥಿಸಿಕೊಂಡಿದ್ದಾರೆ.

ನಗರದ ಬಸ್ ನಿಲ್ದಾಣದ ಎದುರು ನಿರ್ಮಿಸಲಾಗುವ ಪಾದಚಾರಿ ಸೇತುವೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿದ ನಂತರ     ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೇವಲ ತಾವೊಬ್ಬರೆ ಆಣೆ, ಪ್ರಮಾಣ ಮಾಡಲು ಮುಂದಾಗದೇ ತಪ್ಪಿತಸ್ಥರನ್ನು ಆಹ್ವಾನಿಸಿದ್ದಾರೆ. ಆತ್ಮಸಾಕ್ಷಿ ಇದ್ದವರು ಮುಖ್ಯಮಂತ್ರಿಗಳು ನೀಡಿರುವ ಆಹ್ವಾನವನ್ನು ಒಪ್ಪಿಕೊಂಡು ಬರುತ್ತಾರೆ. ಇಲ್ಲದವರು ಬರುವುದಿಲ್ಲ ಎಂದು  ನುಡಿದರು.

ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ಮುಖ್ಯ ಮಂತ್ರಿ ದೇವರ ಮೇಲೆ ಪ್ರಮಾಣ ಮಾಡಲು ಮುಂದಾಗಿರುವುದು ಸರಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ಅವರ (ಮುಖ್ಯಮಂತ್ರಿಗಳ) ಮೇಲೆ ಕುಮಾರಸ್ವಾಮಿಯವರು ಸುಳ್ಳು ಆಪಾದನೆ ಮಾಡಿರುವುದನ್ನು ಸರಿ ಎಂದು ಒಪ್ಪಿಕೊಂಡರೆ, ಅವರು ಪ್ರಮಾಣ ಮಾಡಲು ಮುಂದಾಗಿರು ವುದು ಹೇಗೆ ತಪ್ಪಾಗುತ್ತದೆ ಎಂದು ಮರು ಪ್ರಶ್ನೆ ಹಾಕಿದರು.

ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.