ಬ್ಯಾಡಗಿ: ರಾಜ್ಯದಲ್ಲಿ ಉನ್ನತ ಶಿಕ್ಷಣದ ಶುಲ್ಕಗಳು ಹೆಚ್ಚಾಗಿರುವುದರಿಂದ ಅದನ್ನು ಭರಿಸಲಾರದ ಬಡ ವಿದ್ಯಾರ್ಥಿ ಗಳು ಉನ್ನತ ಶಿಕ್ಷಣದಿಂದ ವಂಚಿತರಾ ಗುತ್ತಿದ್ದಾರೆ. ಸರ್ಕಾರ ಅಂತಹ ಶುಲ್ಕಗಳನ್ನು ಕಡಿಮೆಗೊಳಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ರಾಜ್ಯ ಘಟಕದ ಉಪಾಧ್ಯಕ್ಷ ನಾರಾಯಣ ಕಾಳೆ ಒತ್ತಾಯಿಸಿದರು.
ಪಟ್ಟಣದ ಎಸ್‌ಜೆಜೆಎಂ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ ಧ್ವನಿ `ದ್ವೈಮಾಸಿಕ ಪತ್ರಿಕೆ~ಯನ್ನು ಬಿಡುಗಡೆ ಗೊಳಿಸಿ ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದ್ದು, ಭೀತಿಯಿಂದ ಬದುಕು ಸಾಗಿಸುವಂತಾಗಿದೆ. ಕೂಡಲೆ ಸರ್ಕಾರ ಕಾನೂನುಗಳನ್ನು ಬಿಗಿಗೊಳಿಸಿ ಸಮಾನತೆಯ ಜೀವನ ನಡೆಸುವಂತೆ ಅನುವು ಮಾಡಿಕೊಡಬೇಕೆಂದು ಆಗ್ರಹಿ ಸಿದರು.
ರಾಜ್ಯದಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತರಲು ರಾಜಕಾರಣಿಗಳು ಮೀನಮೇಷ ನಡೆಸು ತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಗಟ್ಟಲೆ ವಂತಿಗೆಯನ್ನು ವಸೂಲಿ ಮಾಡುತ್ತಿದ್ದರೂ ಅವರ ಮೇಲೆ ಕ್ರಮ ಕೈಕೊಳ್ಳದೆ ಅವರಿಗೆ ಬೆಂಬಲ ನೀಡು ತ್ತಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಇನ್ನೂ ಸಾಕಷ್ಟು ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ ಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ 38 ಸಾವಿರ ಹುದ್ದೆಗಳು ಖಾಲಿಯಿದ್ದು ಅವುಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವಂತೆ ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಂಕಮ್ಮ ಸಂಕಣ್ಣನವರ ಮಾತ ನಾಡಿ ಸರ್ಕಾರದ ಅಂಕಡೊಂಕುಗಳನ್ನು ತಿದ್ದಲು ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ ಸಾರ್ವ ಜನಿಕ ಸಮಸ್ಯೆ ಗಳಿಗೆ ಸ್ಪಂದಿಸುವ ಮೂಲಕ ನ್ಯಾಯ ದೊರಕಿಸಿಕೊಡಲು ಪತ್ರಿಕೆಗಳು ಪ್ರಾಮಾಣಿಕ ಪ್ರಯತ್ನ ಕೈಕೊಳ್ಳುತ್ತಿವೆ ಎಂದು ಹೇಳಿದರು.
ಉಪಪ್ರಾಚಾರ್ಯ ಕೆ.ಎಫ್.ಭಜಂತ್ರಿ ಕಾರ್ಯಕ್ರಮದ ವಹಿಸಿದ್ದರು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ, ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪೂಜಾರ, ತಾಲ್ಲೂಕು ಅಧ್ಯಕ್ಷ ಮಂಜು ನಾಥ ಪೂಜಾರ, ವಿದ್ಯಾರ್ಥಿ ಮುಖಂಡ ರಾದ ವಿಜಯಕುಮಾರ ಶಿಡ್ಲಣ್ಣನವರ, ಪುಟ್ಟಪ್ಪ ಕಂಬಳಿ, ಗಣೇಶ ಬಾರ್ಕಿ, ರಾಘವೇಂದ್ರ ಕಿತ್ತೂರ, ವಸಂತ ಬ್ಯಾಟಪ್ಪನವರ, ದಯಾನಂದ ಕಂಬಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.