ಹಾವೇರಿ: ಅಸ್ಸಾಂ ಗಲಭೆಗೆ ಕಾರಣ ರಾದ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಘಟಕದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹೊಸಮಠದ ಬಿಎಡ್ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೈಲಾರ ಮಹದೇವಪ್ಪ ವೃತ್ತದಲ್ಲಿ ಕೆಲಹೊತ್ತು ರಸ್ತೆತಡೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ, ಬಾಂಗ್ಲಾದೇಶದ ನುಸು ಳುಕೋರರು ಭಾರತೀಯ ಮೂಲ ನಿವಾಸಿಗರ ಜಮೀನು, ಮನೆ, ಕಂಪೆನಿ, ಸಂಸ್ಥೆ ಹಾಗೂ ಸರ್ಕಾರಿ ಸಂಸ್ಥೆಗಳ ಹುದ್ದೆಗಳನ್ನು ಅಕ್ರಮವಾಗಿ ಪಡೆದು ಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ಅಸ್ಸಾಂನ ಚಿರಂಗ್, ಕೊಕ್ರಾಜರ್, ಬಕ್ಸರ್, ದುಬ್ರಿ, ವಂಗಾಯಿಗಾಂವ್ ಮತ್ತಿತರ ಜಿಲ್ಲೆಗಳಲ್ಲಿ ಭಾರತೀಯ ಮೂಲ ನಿವಾಸಿಗಳಿಗೂ ಬಾಂಗ್ಲಾ ದೇಶದಿಂದ ಬಂದಿರುವ ಅಕ್ರಮ ವಲ ಸಿಗರ ಮಧ್ಯೆ ಹಿಂಸಾಚಾರ ನಡೆಯು ತ್ತಿದೆ. ಪರಿಣಾಮವಾಗಿ 52 ಜನರ ಹತ್ಯೆಯಾಗಿದೆ. ಲಕ್ಷಾಂತರ ಜನರು ನಿರಾ ಶ್ರಿತರಾಗಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಮತ ಬ್ಯಾಂಕ್‌ಗಾಗಿ ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಂರನ್ನು ಬೆಂಬಲಿಸುತ್ತಲೇ ಬಂದಿವೆ. ಇದರ ಪರಿಣಾಮವಾಗಿ ಇಂದು ಪರಿಸ್ಥಿತಿ ಹಿಂಸಾಚಾರಕ್ಕೆ ತಿರು ಗಿದೆ. ಇನ್ನೊಂದೆಡೆ ಪೊಲೀಸ್ ಶಕ್ತಿಯ ಮೂಲಕ ಮೂಲನಿವಾಸಿ ಭಾರತೀ ಯರ ಬೇಡಿಕೆ, ಶಕ್ತಿಯನ್ನು ಹತ್ತಿಕ್ಕ ಲಾಗುತ್ತಿದೆ ಎಂದರು.
ದೇಶದಲ್ಲಿ 3.5 ಕೋಟಿಗೂ ಅಧಿಕ ಬಾಂಗ್ಲಾ ವಲಸಿಗರಿದ್ದರು, ಅವರನ್ನು ವಾಪಸ್ ಕಳುಹಿಸುವ ಪ್ರಯತ್ನ ಮಾಡಿಲ್ಲ. ಹೀಗಾಗಿ ಪೂರ್ವಾಂಚಲ ರಾಜ್ಯಗಳೆಲ್ಲವೂ ಬಾಂಗ್ಲಾ ವಲಸಿಗ ಮುಸ್ಲಿಂರಿಂದ ತುಂಬಿವೆ. ಇವರ ಸಂಖ್ಯೆ ಹೆಚ್ಚಾಗಿರುವ ರಾಜ್ಯಗಳಲ್ಲಿ ಮೂಲ ಭಾರತೀಯರಿಗೆ ರಕ್ಷಣೆ, ಸೌಲಭ್ಯಗಳೆಲ್ಲ ಮರೀಚಿಕೆಯಾಗಿದೆ ಎಂದು ಹೇಳಿದರು.
ಸರ್ಕಾರ ಈಗಲಾದರೂ ಎಚ್ಚೆತ್ತು ಮೂಲ ಭಾರತೀಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಬಾಂಗ್ಲಾ ಭಾರತ ಗಡಿ ಯಲ್ಲಿ ಸೇನೆಯನ್ನು ನಿಯೋಜಿಸಿ ಅಕ್ರಮ ವಲಸೆಯನ್ನು ನಿಯಂತ್ರಿಸಬೇಕು. ಉಗ್ರ ಮತ್ತು ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿರುವ ಹೂಜಿಯಂಥ ಭಯೋತ್ಪಾದಕ ಸಂಘಟನೆಗಳನ್ನು ಹತ್ತಿಕ್ಕಬೇಕು ಎಂದು ಮದರಖಂಡಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾರ್ಯಕರ್ತ ರಾದ ನಾಗರಾಜ ಹುರಳಿಕುಪ್ಪಿ, ಬಸವರಾಜ ಟೀಕಿಹಳ್ಳಿ, ನಾಗರಾಜ, ಸಾಗರ ಅಂಗಡಿ, ಸಂತೋಷ, ಬಸವರಾಜ, ನವೀನ ಪವಾರ, ರಾಜಶೇಖರ, ಸಿದ್ಧರಾಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.