ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಖಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರದ ಅವ್ಯವಸ್ಥೆ ಆಗರವಾಗಿದ್ದು, ಅದಕ್ಕೆ ಅಧಿಕಾರಿಗಳೆ ಹೊಣೆಯಾಗಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಖಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರದ ಸಹಾಯ ನಿರ್ದೇಶಕ ಪರಮೇಶ್ವರ ನಾಯ್ಕ ಅವರು ಶುಕ್ರವಾರ ಸ್ಪಷ್ಟೀಕರಣ ನೀಡಿದರು.
ಖಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರದಲ್ಲಿ ಸುಮಾರು ವರ್ಷಗಳಿಂದ ಸಹಾಯಕರಿಲ್ಲದೆ ಒಬ್ಬರೆ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ. ಬೆಳ ಗಾವಿ ವಿಭಾಗದಲ್ಲಿ ನಡೆಯುವ ಕಾರ್ಯಾಗಾರಗಳಿಗೆ, ಕೋರ್ಟ್ ಕಚೇರಿಗಳಿಗೆ ಹಾಗೂ ಕೆಲವು ಬಾರೊ ಕಚೇರಿ ಕೆಲಸಕ್ಕಾಗಿ ಬೆಂಗಳೂರು, ಬಿಜಾಪುರ ಹಾಗೂ ಬೆಳಗಾವಿಗೆ ಹೋಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಕಚೇರಿಯಲ್ಲಿ ಸಹಾಯಕರಿಲ್ಲದ ಕಾರಣ ಯಾರಿಗೂ ಚಾರ್ಜ್ ಕೊಡಲು ಸಾಧ್ಯವಿಲ್ಲದಾಗಿದೆ ಎಂದರು.
ಟೆಂಡರ್‌ದಾರರು ಮತ್ತೆ ಟೆಂಡರನ್ನು ಪಡೆದು ಮುಂದುವರಿಸಿ ್ದದಾರೆ. ಟೆಂಡರ್ ಪಡೆಯುವ ಗೊಂದಲದಲ್ಲಿ ಮಾನವೀಯ ದೃಷ್ಟಿಯಿಂದ ಇಲ್ಲಿನ ಸಿಬ್ಬಂದಿಗಳು ಜಾನುವಾರಗಳನ್ನು ಕಾಯ್ದಿದ್ದಾರೆ. ಅಲ್ಲದೆ ಇಲ್ಲಿನ ಕಾಮಗಾರಿಗಳಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನವಿಲುಧಾಮ ನೋಡಿಕೊಳ್ಳುವ ಸಂಸ್ಥೆಯಿದ್ದು, ನವಿಲುಗಳ ಸಂರಕ್ಷಣೆ ಅದರ ಹೊಣೆಯಾಗಿದೆ ಎಂದ ಅವರು ಎಲ್ಲವು ಸರ್ಕಾರದ ಆದೇಶದಂತೆ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.