ADVERTISEMENT

ದಸಂಸ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 9:17 IST
Last Updated 3 ಡಿಸೆಂಬರ್ 2013, 9:17 IST

ಹಾವೇರಿ: ಸದಾಶಿವ ಆಯೋಗದ ವರದಿ ಜಾರಿಗೆ ಹಾಗೂ ದಲಿತ, ಹಿಂದು ಳಿದ, ಅಲ್ಪಸಂಖ್ಯಾತ ವರ್ಗಗಳ ಬಡ ಜನರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಎಸ್‌ಎಸ್‌ ಕಾರ್ಯ ಕರ್ತರು ಸೋಮವಾರ ನಗರದ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಮುರಘರಾಜೇಂದ್ರ ಮಠ ದಿಂದ ಆರಂಭವಾದ ಪ್ರತಿಭಟನಾ ಮೆರ ವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತಲ್ಲದೇ, ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿತು.

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನ ಗೊಳಿಸಬೇಕು, ಖಾಲಿ ಇರುವ ಬ್ಯಾಕ ಲಾಗ್ ಹುದ್ದೆಗಳನ್ನು ಮೀಸಲಾತಿ ಅನ್ವಯ ವರ್ಗಿಕರಣ ಮಾಡಿ ಕೂಡಲೇ ಭರ್ತಿ ಮಾಡಬೇಕು. ಅಲ್ಲದೆ ವಿವಿಧ ಇಲಾಖೆಗಳಲ್ಲಿ ೧೫ ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಕಾಯಂಗೊಳಿಸಬೇಕು. ಮಾದಿಗ ಹಾಗೂ ಹೊಲೆಯ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸ ಬೇಕು. ಜಿಲ್ಲೆಯ ಬಡ ದಲಿತ, ಹಿಂದು ಳಿದ ಜನರು ಅಕ್ರಮ ಸಾಗುವಳಿ ಮಾಡುತ್ತಿರುವ ಜಮೀನನ್ನು ಸಕ್ರಮಗೊಳಿಸ ಬೇಕು. ಮಾದಾರ ಚನ್ನಯ್ಯ ಜಯಂತಿ ಯನ್ನು ಸರ್ಕಾರವೇ ಆಚರಣೆ ಮಾಡ ಬೇಕು. ಭದ್ರಾವತಿ ಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದವರನ್ನು ಕೂಡಲೇ ಬಂಧಿಸ ಬೇಕು. ಅಲ್ಲದೆ ಬ್ಯಾಂಕ್‌ಗಳಲ್ಲಿ ಪಡೆದ ನಿರುದ್ಯೋಗಿಗಳ ಸಾಲವನ್ನು ಮನ್ನಾ ಮಾಡಬೇಕು. ಹಿರೆಕೇರೂರು ತಾಲ್ಲೂ ಕಿನ ಬೆಟಕೇರೂರು ಗ್ರಾಮದಲ್ಲಿ ದಲಿತರ ಮೇಲೆ ನಡೆದಿರುವ ಸುಳ್ಳು ಮೊಕದ್ದಮೆ ಹಿಂತೆಗೆದುಕೊಳ್ಳಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿ ಕೆಗೆ ಒತ್ತಾಯಿಸಿ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ವಾಸುದೇವ ಬಸವ್ವನವರ, ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ, ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯಗಾಂಧಿ ಸಂಜೀವಣ್ಣನವರ, ನಿಂಗಪ್ಪ ನಿಂಬಕ್ಕನವರ, ಬಾಬಕ್ಕ ಬಳ್ಳಾರಿ, ಉಡಚಪ್ಪ ಮಾಳಗಿ, ದುರು ಗವ್ವ ಹರಿಜನ, ಹನುಮವ್ವ ಹರಿಜನ, ಲಕ್ಕಮ್ಮ ಹರಿಜನ, ಎಂ. ಮಾಳಗಿಮನಿ, ಬಸವರಾಜ, ನಿಂಗಪ್ಪ, ಬಸಣ್ಣ ಮುಗಳಿ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.