ADVERTISEMENT

ಧಾರಾಕಾರ ಮಳೆಗೆ ಭತ್ತದ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 6:53 IST
Last Updated 17 ಅಕ್ಟೋಬರ್ 2017, 6:53 IST
ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಗ್ರಾಮದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ನೆಲಕ್ಕಚ್ಚಿದ ಭತ್ತದ ಬೆಳೆ
ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಗ್ರಾಮದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ನೆಲಕ್ಕಚ್ಚಿದ ಭತ್ತದ ಬೆಳೆ   

ರಾಣೆಬೆನ್ನೂರು: ತಾಲ್ಲೂಕಿನ ಮಾಕನೂರು ಗ್ರಾಮದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ನೂರಾರು ಎಕರೆ ಭತ್ತದ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ಕಳೆದ ಮೂರು ವರ್ಷದಿಂದ ಬರಗಾಲ ಆವರಿಸಿ ತುಂಗಭದ್ರಾ ನದಿ ಸಂಪೂರ್ಣ ಭತ್ತಿ ಹೋಗಿದ್ದರಿಂದ, ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದರು.

ಆದರೆ, ಈ ಬಾರಿ ಮುಂಗಾರು ಮಳೆ ಉತ್ತಮವಾಗಬಹುದೆಂಬ ನಿರೀಕ್ಷೆಯಿಂದ ಸಾಲ ಸೂಲ ಮಾಡಿ ಗೊಬ್ಬರ, ಬೀಜವನ್ನು ತಂದು ಅಲ್ಪಸ್ವಲ್ಪ ಮಳೆಗೆ ಬಿತ್ತಿದ್ದರು. ಆದರೆ, ಮಧ್ಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಗೋವಿನ ಜೋಳ ಲದ್ದಿ ಹುಳು ಬಾಧೆಯಿಂದ ಸಂಪೂರ್ಣ ಹಾನಿಗೊಂಡಿದೆ’ ಎಂದರು.

ಈಗ ಧಾರಾಕಾರ ಮಳೆಯಾಗುತ್ತಿರುವುದರಿಂದ ಬೆಳೆದು ನಿಂತ ಭತ್ತದ ಬೆಳೆಯು ರೈತರ ಕೈಸೇರದೇ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ‌ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಈ ವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ ಎಂದರು. ಹನುಮಂತಪ್ಪ ಚಾಟಣ್ಣನವರ, ಬಸವಣ್ಣೆಪ್ಪ ಬಣಕಾರ, ಬಸಪ್ಪ ಬಣಕಾರ, ಮಂಜುನಾಥ ಹಲಗೇರಿ, ಕುಲಕರ್ಣಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.