ADVERTISEMENT

ನಾಟಿ ವೈದ್ಯೋಪಚಾರ ಶಾಶ್ವತ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 9:45 IST
Last Updated 19 ಜೂನ್ 2012, 9:45 IST

ಸವಣೂರ: ಆಧುನಿಕ ಜೀವನ ಪದ್ಧತಿ ಹಾಗೂ ಆಹಾರ ಕ್ರಮ ಇಂದಿನ ಅಸ್ವಸ್ಥತೆಯ ಜೀವನಕ್ಕೆ ಮೂಲ ಕಾರಣವಾಗಿದೆ. ಸಧೃಢವಾದ ಶರೀರ ದಿಂದ ಮಾತ್ರ ಸಾಧನೆ ಸಾಧ್ಯವಾಗು ತ್ತದೆ ಎಂದು ಹೂವಿನಶಿಗ್ಲಿ ವಿರಕ್ತ ಮಠದ ಚನ್ನವೀರ ಸ್ವಾಮಿಗಳು ತಿಳಿಸಿದರು. 

ನಗರದಲ್ಲಿ ರಾಜ್ಯ ಪಾರಂಪರಿಕ ವೈದ್ಯ ಪರಿಷತ್, ಜಿಲ್ಲಾ ಪಾರಂಪರಿಕ ವೈದ್ಯರು ಹಾಗೂ ನಾಟಿ ವೈದ್ಯರ ಸಹಯೋಗದಲ್ಲಿ ಈಚೆಗೆ ಏರ್ಪಡಿಸ ಲಾಗಿದ್ದ, ಗಿಡ ಮೂಲಿಕೆ ಔಷಧ ಪ್ರದರ್ಶನ ಹಾಗೂ ಉಚಿತ ಆರೋಗ್ಯ ತಪಾಸಣಾ, ಔಷಧ ವಿತರಣಾ ಸಮಾ ರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವಿದೇಶಿ ಔಷಧಿ ಪದ್ಧತಿ ರೋಗ ವನ್ನು ಕ್ಷಣಿಕವಾಗಿ ದೂರಮಾಡುತ್ತದೆ. ಆದರೆ ಅಡ್ಡಪರಿಣಾಮಗಳನ್ನು ಶಾಶ್ವತವಾಗಿ ಉಳಿಸುತ್ತದೆ. ನಾಟಿ ಪದ್ಧತಿಯಲ್ಲಿ ಮಾತ್ರ ಎಲ್ಲ ರೋಗಗಳಿಗೆ ಖಚಿತವಾದ ಚಿಕಿತ್ಸೆ ಪಡೆಯಬಹುದಾ ಗಿದೆ. ಇಂತಹ ಪುರಾತನವಾದ ನಾಟಿ ಔಷಧಿಯ ಬಗ್ಗೆ ಎಲ್ಲರೂ ವಿಶ್ವಾಸ ಹೊಂದಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ರಾಜಶೇಖರ ಸಿಂಧೂರ, ಪರಿಣಾಮ ಕಾರಿ ಚಿಕಿತ್ಸೆ ಸುಲಭ ಸಾಧ್ಯವಾಗುವ ನಾಟಿ ವೈದ್ಯಕೀಯ ಪದ್ದತಿ ಹೆಚ್ಚು ಪ್ರಚಲಿತಗೊಳ್ಳಬೇಕು. ಗಿಡ ಮೂಲಿಕಾ ಔಷಧಿಗಳ ಬಗ್ಗೆ ಜಾಗೃತಿ ಮೂಡಬೇಕು ಎಂದು ತಿಳಿಸಿದರು.

ನಾಟಿ ಪದ್ದತಿಯಲ್ಲಿ ಪರಿಣಾಮ ಕಾರಿ ಚಿಕಿತ್ಸೆ ಸಾಧ್ಯವಿದೆ., ಈ ಚಿಕಿತ್ಸಾ ಪದ್ದತಿ ಹಾಗೂ ಪರಂಪರೆ ಉಳಿದು ಕೊಳ್ಳಲಿ. ಮಕ್ಕಳಲ್ಲಿಯೂ ನಾಟಿ ಔಷಧಿಗಳ ಬಗ್ಗೆ ಆಸಕ್ತಿ ತಿಳುವಳಿಕೆ ಮೂಡಲಿ. ಈ ಚಿಕಿತ್ಸಾ ವಿಧಾನದ ಬಗ್ಗೆ ವಿಶ್ವಾಸ ಇರಲಿ. ನಾಟಿ ವೈದ್ಯರು ತಮ್ಮ ಚಿಕಿತ್ಸಾ ಪದ್ದತಿಯ ಬಗ್ಗೆ ಬದ್ಧತೆ ತೋರಲಿ ಎಂದು ರಾಜಶೇಖರ  ಸಿಂಧೂರ ತಿಳಿಸಿದರು.

ಗೋಮೂತ್ರ, ಗೋಮಯಗಳ ಮಹತ್ವ ನೈಸರ್ಗಿಕ ಕುಂಕುಮ ತಯಾ ರಿಕಾ ವಿಧಾನ ಹಾಗೂ ಕೃತಕ ಬಣ್ಣದ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ದರು. ನಗರದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯ ಕ್ರಮದ ಅಡಿ ನೂರಾರು ವಿವಿಧ ಔಷಧೀಯ ಸಸ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಜಿಲ್ಲೆಯ ಹಿರಿಯ ನಾಟಿ ವೈದ್ಯರು ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕೈಗೊಂಡರು.  ಅಡವಿ ಸ್ವಾಮಿ ಮಠದ ಕುಮಾರ ಸ್ವಾಮಿಗಳು ಸಾನ್ನಿಧ್ಯ ವಹಿಸಿಕೊಂಡು ಶುಭ ಹಾರೈಸಿದರು.

ಸಂಘಟನೆಯ ರಾಜ್ಯ ಪದಾಧಿಕಾರಿಗಳಾದ  ಎಲ್. ರಾಜು ಪಂಡಿತ, ಜಿಲ್ಲಾ ಅಧ್ಯಕ್ಷ ವಿಷ್ಣಪ್ಪ ಎನ್. ಕೋಟಿ ಹಾಳ, ತಿಪ್ಪಣ್ಣ ಫಕ್ಕೀರಪ್ಪ ಸಾಲಿ ಖಾನಿ, ತಾಲ್ಲೂಕು ಅಧ್ಯಕ್ಷ ಶಿವಾಜಿ ಅಂ. ವಾಣಿ,  ಶಿವಣ್ಣ ಚ. ಪಿತಾಂಬ್ರ ಶೆಟ್ಟಿ, ವಿಶ್ವನಾಥ ಚಿತ್ರಗಾರ, ವೀರಯ್ಯ ಹಿರೇಮಠ ಸೇರಿಂದತೆ ಎಲ್ಲ ನಾಟಿ ವೈದ್ಯರು ಉಪಸ್ಥಿತರಿದ್ದರು. ಎಸ್. ಎನ್.ನಂದಿಮಠ ನಿರ್ವಹಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.