ADVERTISEMENT

ಬ್ಯಾಡಗಿ ಮೆಣಸಿನಕಾಯಿ ವಿಶ್ವದಲ್ಲೇ ಉತ್ಕೃಷ್ಟ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 9:25 IST
Last Updated 6 ಜನವರಿ 2012, 9:25 IST

ಬ್ಯಾಡಗಿ: ಇಲ್ಲಿಯ ಬ್ಯಾಡಗಿ ಮೆಣಸಿನಕಾಯಿ ತಳಿ ಪ್ರಪಂಚ ದಲ್ಲಿಯೇ ಉತ್ಕೃಷ್ಟ ಹಾಗೂ ಸ್ವಾದಿಷ್ಟವನ್ನು ಹೊಂದಿದೆ ಎಂದು ಜರ್ಮನಿಯ ಜಾರ್ಜ್ ಕುರಿಯನ್ ಹೇಳಿದರು.

ಬುಧವಾರ ಇಲ್ಲಿಯ ಅಂತರರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಜರ್ಮನ್ ನಿಯೋಗ ಭೇಟಿ ನೀಡಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು. ಬ್ಯಾಡಗಿ ಮೆಣಸಿನಕಾಯಿ ತಳಿಯನ್ನು ಕಳೆದ  25 ವರ್ಷಗಳಿಂದಲೂ ಜರ್ಮಜನಿಯಲ್ಲಿ ಉಪಯೋಗಿಸುತ್ತಿ ದ್ದೆೀವೆ. ಇಲ್ಲಿ ಬೆಳೆಯುವ ಲೋಕಲ್ ಮೆಣಸಿನಕಾಯಿ ಹೆಚ್ಚು ರುಚಿಕರ ವಾಗಿದ್ದು ಕಡುಗೆಂಪು ಬಣ್ಣ ಹಾಗೂ ವಿಶಿಷ್ಟ ಸ್ವಾದಿಷ್ಟವನ್ನು ಹೊಂದಿದೆ. ಹೀಗಾಗಿ ಇಲ್ಲಿನ ಮೆಣಸಿನಕಾಯಿಯಿಂದ ಓಲಿಯೋ ರೆಜಿನ್ ಹೆಚ್ಚಿನ ಪ್ರಮಾಣದಲ್ಲಿ ಪಡೆಯಬಹುದಾಗಿದೆ ಎಂದರು.

ಇತ್ತೀಚೆಗೆ ಚೀನಾ ದೇಶದಲ್ಲಿ ಬೆಳೆಯುವ ಮೆಣಸಿನಕಾಯಿ ದುಬಾರಿಯಾಗಿದ್ದು ಇಲ್ಲಿಯ ಮೆಣಸಿನಕಾಯಿಯಷ್ಟು ರುಚಿಕರ ವಾಗ್ಲ್ಲಿಲ. ಬ್ಯಾಡಗಿ ಮೆಣಸಿನಕಾಯಿ ಉತ್ಪಾದನೆಯ ಪ್ರಮಾಣದಲ್ಲಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆಗೆ ತಕ್ಕಂತೆ ಇಲ್ಲಿಯ ಉದ್ಯಮಿಗಳಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತ್ಲ್ಲಿಲ. ಸರಕಾರ ಮೆಣಸಿನಕಾಯಿ ಬೆಳೆಯುವ ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡಿದಾಗ ಮಾತ್ರ ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚು ಉತ್ಪಾದನೆ ಸಾಧ್ಯವಾಗುತ್ತದೆ. ಇಲ್ಲಿಯ ರೈತರು ಹೆಚ್ಚು ಉತ್ಪಾದನೆ ಮಾಡಲು ಮುಂದಾಗುವಂತೆ ಮನವಿ ಮಾಡಿಕೊಂಡರು.

ಕಳೆದ ಹತ್ತು ವರ್ಷಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದಾಗ ಮಾರುಕಟ್ಟೆ ಪ್ರಾಂಗಣ ನೆಲಹಾಸಿನಿಂದ ಕೂಡಿತ್ತು.  ಕಾಂಕ್ರಿಟ್ ನಿರ್ಮಿಸುವ ಮೂಲಕ ಸ್ವಚ್ಛತೆ  ಕಾಯ್ದುಕೊಳ್ಳಲಾಗಿದೆ ಎಂದರು.  ಸುಮೋದ, ಜಾನ್‌ಸ್ನೋಫರ್, ಕೋಲನ್ ಇಲ್ಲಿಯ ಮೆಣಸಿನಕಾಯಿ ಉದ್ಯಮಿ ಜಗದೀಶಗೌಡ್ರ ಪಾಟೀಲ  ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.