ADVERTISEMENT

`ಮಕ್ಕಳಿಗೆ ಸಂಸ್ಕಾರ ನೀಡುವುದು ಮುಖ್ಯ'

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 6:52 IST
Last Updated 26 ಏಪ್ರಿಲ್ 2013, 6:52 IST
ರಾಣೆಬೆನ್ನೂರಿನ ಕೊಟ್ಟೂರೇಶ್ವರ ಮಠ ಮತ್ತು ಸಂಗಮೇಶ್ವರಮಠದ ಸಭಾ ಭವನದಲ್ಲಿ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರದಲ್ಲಿ ಇಂಗಳೇಶ್ವರ ಚನ್ನಬಸವ ಸ್ವಾಮೀಜಿ. ಶಿವಯೋಗೀಶ್ವರ ಮತ್ತು ಲಿಂಗನಾಯಕನ ಹಳ್ಳಿ ಚನ್ನವೀರ ಸ್ವಾಮೀಜಿ ಅವರು  ನಿತ್ಯಲಿಂಗಪೂಜೆ ಪ್ರಾತ್ಯಕ್ಷಿಕೆ ಹಾಗೂ ಸಹಜ ಶಿವಯೋಗದ ನಡೆಸಿಕೊಟ್ಟರು.
ರಾಣೆಬೆನ್ನೂರಿನ ಕೊಟ್ಟೂರೇಶ್ವರ ಮಠ ಮತ್ತು ಸಂಗಮೇಶ್ವರಮಠದ ಸಭಾ ಭವನದಲ್ಲಿ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರದಲ್ಲಿ ಇಂಗಳೇಶ್ವರ ಚನ್ನಬಸವ ಸ್ವಾಮೀಜಿ. ಶಿವಯೋಗೀಶ್ವರ ಮತ್ತು ಲಿಂಗನಾಯಕನ ಹಳ್ಳಿ ಚನ್ನವೀರ ಸ್ವಾಮೀಜಿ ಅವರು ನಿತ್ಯಲಿಂಗಪೂಜೆ ಪ್ರಾತ್ಯಕ್ಷಿಕೆ ಹಾಗೂ ಸಹಜ ಶಿವಯೋಗದ ನಡೆಸಿಕೊಟ್ಟರು.   

ರಾಣೆಬೆನ್ನೂರು: `ನಾವು ಅನೇಕ ವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದೇವೆ, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದನ್ನು ಮರೆತಿದ್ದೇವೆ, ಮಕ್ಕಳಲ್ಲಿ ಅರಿವಿನ ಬೆಳಕನ್ನು ಪ್ರಜ್ವಲಗೊಳಿಸಿ ಉತ್ತಮ ಶೀಲ ಸಂಸ್ಕಾರ, ಮೌಲ್ಯಗಳನ್ನು ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿದುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ' ಎಂದು ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮೀಜಿ ಹೇಳಿದರು.

ನಗರದ ಕೊಟ್ಟೂರೇಶ್ವರ ಮಠ ಮತ್ತು ಸಂಗಮೇಶ್ವರಮಠದ ಸಭಾ ಭವನದಲ್ಲಿ ವ್ಯಕ್ತಿತ್ವ ವಿಕಸನ ಐದನೇ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು.
ಹಾನಗಲ್ ಗುರುಕುಮಾರ ಸ್ವಾಮೀಜಿ ಅವರು 1908ರಲ್ಲಿ ಲಿಂಗನಾಯಕನಹಳ್ಳಿಮಠಕ್ಕೆ ಆಗಮಿಸಿದಾಗ ಶಿವಾನುಭವ, ಸಹಜ ಶಿವಯೋಗ ಕಾರ್ಯಕ್ರಮಗಳನ್ನು ಮೆಚ್ಚಿ ಶ್ರೀಗಳ ಪ್ರೇರಣೆಯಿಂದ 1909ರಲ್ಲಿ  ಶಿವಯೋಗ ಮಂದಿರ ನಿರ್ಮಾಣ ಮಾಡಲು ಮುಂದಾಗಿದ್ದರು ಎಂದರು.

ಲಿಂಗನಾಯಕಹಳ್ಳಿ ಶ್ರೀ ಮಠ ಕಳೆದ 2009ರಿಂದ 8ನೇ ತರಗತಿ ಮೇಲಿನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು `ಅರಿವು ಆಚಾರ ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದೆ, ಎಲ್ಲ ಸಂಪನ್ಮೂಲಗಳಿಗಿಂತ ಮಾನವ ಸಂಪನ್ಮೂಲ ಶ್ರೇಷ್ಠವಾದುದು, ಹೀಗಾಗಿ ವ್ಯಕ್ತಿಗಳಿಗೆ ವಿಶೇಷ ತರಬೇತಿ ನೀಡಿ ಅವರ ಕೌಶಲವನ್ನು ವೃದ್ಧಿ ಮಾಡುವುದ ಶಿಬಿರದ ಗುರಿಯಾಗಿದೆ ಎಂದರು.

ಹೊಸಪೇಟೆ ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್.ಶಿವಾನಂದ ಮತ್ತು ಇಂಗಳೇಶ್ವರ ಚನ್ನಬಸವ ಸ್ವಾಮೀಜಿ ಅವರು `ಕರಣ ಹಸುಗೆ' ಬಗ್ಗೆ ಉಪನ್ಯಾಸ ನೀಡಿದರು. ನಿರಂಜನ ದೇವರು ಯೋಗ ತರಬೇತಿ ನೀಡಿದರು.

ಗುಡ್ಡದ ಆನ್ವೇರಿ ಶಿವಯೋಗೀಶ್ವರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಮತ್ತು ಲಿಂಗನಾಯನಹಳ್ಳಿ ಚನ್ನವೀರಸ್ವಾಮೀಜಿ ಅವರು ನಿತ್ಯ ಲಿಂಗಪೂಜೆ ಪ್ರಾತ್ಯಕ್ಷಿಕೆ ಹಾಗೂ ಸಹಜ ಶಿವಯೋಗದ ನಡೆಸಿಕೊಟ್ಟರು.

ಚಂದ್ರಣ್ಣ ರಮಾಳದ, ಬಸವರಾಜ ರೊಡ್ಡನವರ, ಶರಣಪ್ಪ ಕಟಗೀಹಳ್ಳಿ, ಚನ್ನವೀರಪ್ಪ ಅಸುಂಡಿ, ಚಂದ್ರಯ್ಯ ನೂರಂದೇವರಮಠ, ಬಸವರಾಜ ಬೇತೂರ, ಚಕ್ರಸಾಲಿ, ಸಿದ್ದೇಶ, ಲೆಕ್ಕದಪ್ಪ ಜಂಬಗಿ, ಶರಣಪ್ಪ, ವಿಶ್ವಾರಾಧ್ಯ ಅಜ್ಜೇವಡಿಮಠ, ಕೆ.ಎಸ್. ಬಣಗಾರ, ಶಿವಣ್ಣ ಬಳ್ಳಾರಿ, ಕಪ್ಪತ್ತಪ್ಪ ಸಾಲಿಮನಿ, ಶಿವಣ್ಣ ಹಿತ್ತಲಮನಿ, ಸಿದ್ಧರಾಮಣ್ಣ, ಎಸ್.ಆರ್.ಕರ್ಜಗಿಮಠ, ಶಕುಂತಲಮ್ಮ ಜಂಬಗಿ, ಅನ್ನಪೂರ್ಣಮ್ಮ ದಾನಪ್ಪನವರ, ಶಾಂತಯ್ಯ ಕೊಟ್ನಿಕಲ್ಮಠ, ಮುರುಗೇಶ ಪುರಾಣಿಕಮಠ, ಗಾಯತ್ರಮ್ಮ ಕುರುವತ್ತಿ ಮತ್ತಿತರರು ಉಪಸ್ಥಿತರಿದ್ದರು. ಅಕ್ಕನ ಬಳಗದ ಸದಸ್ಯೆಯರು ಪ್ರಾರ್ಥಿಸಿದರು. ಸುವರ್ಣಮ್ಮ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ವಿ.ಹರಪನಹಳ್ಳಿ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.