ADVERTISEMENT

ಮುಗಿಯದ ಪಾದಚಾರಿ ಮೇಲ್ಸೇತುವೆ...

ವಿಜಯ್ ಹೂಗಾರ
Published 31 ಅಕ್ಟೋಬರ್ 2011, 7:05 IST
Last Updated 31 ಅಕ್ಟೋಬರ್ 2011, 7:05 IST
ಮುಗಿಯದ ಪಾದಚಾರಿ ಮೇಲ್ಸೇತುವೆ...
ಮುಗಿಯದ ಪಾದಚಾರಿ ಮೇಲ್ಸೇತುವೆ...   

ಹಾವೇರಿ: ನಗರದಲ್ಲಿ ಯಾವುದೇ ಸರ್ಕಾರಿ, ಅರೆ ಸರ್ಕಾರಿ ಕಾಮಗಾರಿ ಕೈಗೆತ್ತಿಕೊಂಡರೂ ನಿಗದಿತ ಅವಧಿ ಯೊಳಗೆ ಮುಗಿಯುವುದಿಲ್ಲ ಎಂಬು ದಕ್ಕೆ ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಎದುರಿನ ಪಾದಚಾರಿಗಳ ಮೇಲ್ಸೇತುವೆ ಕಾಮಗಾರಿ ಕೂಡಾ ಹೊಸದಾಗಿ ಸೇರ್ಪಡೆಗೊಂಡಿದೆ.

ಈಗಾಗಲೇ ನಗರದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ, ಕುಡಿಯುವ ನೀರಿನ ಕಾಮಗಾರಿ, ರಸ್ತೆ ನಿರ್ಮಾಣ ಕಾಮಗಾರಿ, ಹೈಟೆಕ್ ರಸ್ತೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಅವಧಿ ಮುಗಿದು ವರ್ಷಗಳೇ ಕಳೆದಿವೆ. ಆದರೆ, ಕಾಮಗಾರಿಗಳು ಮಾತ್ರ ಇನ್ನೂ  ಕುಂಟುತ್ತಾ, ತೆವಳುತ್ತಾ ನಡೆಯು ತ್ತಲೇ ಇವೆ. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಪಾದಚಾರಿ ಗಳ ಮೇಲ್ಸೇತುವೆ ಕೂಡಾ ನಿಗದಿತ ಅವಧಿಯೊಳಗೆ ಮುಗಿಯಬಹುದೆಂಬ ಸಾರ್ವಜನಿಕರ ನಿರೀಕ್ಷೆ ಕೂಡಾ ಸುಳ್ಳಾಗಿದೆ.

ಪೂನಾ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಹಾವೇರಿ ನಗರದ ಮಧ್ಯದಲ್ಲಿ ಅದರಲ್ಲೂ ಬಸ್ ನಿಲ್ದಾಣದ ಎದುರಿ ನಲ್ಲಿ ಹಾದು ಹೋಗಿದ್ದು, ನಿತ್ಯ ಸಾವಿ ರಾರು ವಾಹನಗಳು ಸಂಚರಿ ಸುತ್ತವೆ. ಈ ರಸ್ತೆ ದಾಟಲು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಗಮ ನಿಸಿ ಸ್ಥಳೀಯ ನಗರಸಭೆ `ಬಿ.ಓ.ಟಿ. (ನಿರ್ಮಿಸು, ನಿರ್ವಹಿಸು, ಹಸ್ತಾಂತ ರಿಸು) ಯೋಜನೆಯಡಿ ಹುಬ್ಬಳ್ಳಿಯ ಶಾಖಾಂಬರಿ ಎನ್ನುವ ಖಾಸಗಿ ಸಂಸ್ಥೆ ಜತೆ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಒಡಂಬಡಿಕೆ ಮಾಡಿ ಕೊಂಡಿತ್ತು.

ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಅವರು ಜೂನ್ 20, 2011 ರಂದು ಚಾಲನೆ ನೀಡಿದರು. ಸೆಪ್ಟಂಬರ್ ಮೊದಲವಾರ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಸಚಿವರು ಗುತ್ತಿಗೆದಾರರಿಗೆ ಸೂಚಿ ಸಿದ್ದರು. ಕಾಮಗಾರಿ ಗುತ್ತಿಗೆ ಪಡೆದ ಹುಬ್ಬಳ್ಳಿ ಶಾಖಾಂಬರಿ ಸಂಸ್ಥೆಯ ಪಾಲುದಾರ ನರೇಂದ್ರ ಕುಲಕರ್ಣಿ ಕೂಡಾ ಅದೇ ಸಮಾರಂಭದಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸುವ ಭರವಸೆಯನ್ನು ನೀಡಿದ್ದರು.

ಆದರೆ, ಹಾವೇರಿ ನಗರದಲ್ಲಿ ಕಾಮ ಗಾರಿಯನ್ನು ಯಾವಾಗ ಮುಗಿಸಿದರೂ ಕೇಳುವವರೇ ಇಲ್ಲ ಎನ್ನುವ ಮನೋ ಭಾವದಿಂದಲೋ ಏನೋ ಗುತ್ತಿಗೆ ದಾರರು, ತಾವು ನೀಡಿದ ಭರವಸೆ ಯನ್ನು ಮರೆತುಬಿಟ್ಟರು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಗಿಸಬೇಕಾದ ಕಾಮಗಾರಿಯನ್ನು ನವೆಂಬರ್ ತಿಂಗಳೂ ಬಂದರೂ ಮುಗಿಸಿಲ್ಲ. ಯಾವಾಗ ಮುಗಿಯುತ್ತೇ ಎಂದು ಕೇಳಲು ಸಂಸ್ಥೆಗೆ ಅಧಿಕಾರಿಗಳೇ ಇಲ್ಲ. ಕನಿಷ್ಠ ಇನ್ನೂ ಒಂದು ತಿಂಗಳಾ ದರೂ ಬೇಕಾಗುತ್ತದೆ ಎಂದು ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಹೇಳುತ್ತಾರೆ.

ಪ್ರತಿ ನಿತ್ಯ ಜೀವ ಕೈಯಲ್ಲಿ ಹಿಡಿದು ಕೊಂಡು ಜನರು ಓಡಾಡು ತ್ತಿದ್ದಾರೆ. ಆದಷ್ಟು ಬೇಗ ಮೇಲ್ಸೇತುವೆ ಕಾಮ ಗಾರಿಯನ್ನು ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಮಕ್ಕಳು ವೃದ್ಧರು ರಸ್ತೆ ದಾಟಿ ಬಸ್ ನಿಲ್ದಾಣ ತಲುಪುವುದು ಕಷ್ಟವಾಗಿದೆ. ಪೊಲೀಸರು ಇದ್ದರೇ ವಾಹನಗಳನ್ನು ನಿಲ್ಲಿಸಿ ರಸ್ತೆ ದಾಟುವಂತೆ ಮಾಡುತ್ತಾರೆ. ಇಲ್ಲವಾದರೆ, ರಸ್ತೆ ದಾಟುವುದೇ ಕಷ್ಟ ವಾಗುತ್ತದೆ ಎಂದು ನಿತ್ಯ ಬಸ್ ನಿಲ್ದಾಣದಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿ ಸವಿತಾ ಹೇಳುತ್ತಾರೆ.

ವಿಭಜಕ ಅಳವಡಿಸಿ: ಈ ಮೇಲ್ಸೇ ತುವೆ ನಿರ್ಮಾಣದಿಂದ ನಗರದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದ ಸುತ್ತ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗ ಲಿದೆ. ಆದರೆ, ಈ ಸೇತುವೆ ಸಂಚಾರಕ್ಕೆ ಮುಕ್ತವಾದ ತಕ್ಷಣ ಹೆದ್ದಾರಿ ಮಧ್ಯ ದಲ್ಲಿ ಹಾದು ಬಸ್ ನಿಲ್ದಾಣಕ್ಕೆ ತಲುಪು ವುದನ್ನು ತಪ್ಪಿಸಬೇಕು. ಅದಕ್ಕಾಗಿ ರಸ್ತೆ ಮಧ್ಯ ಅಳವಡಿಸಲಾದ ವಿಭಜಕಗಳನ್ನು ಇನ್ನಷ್ಟು ಎತ್ತರ ಮಾಡಬೇಕು. ಆಗ ಮಾತ್ರ ಈ ಮೇಲ್ಸೇತುವ ಉದ್ದೇಶ ಈಡೇರಲು ಸಾಧ್ಯ ಎನ್ನುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.