ADVERTISEMENT

ಮುಷ್ಕರ ಹಿಂತೆಗೆದುಕೊಂಡ ರೈತರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 9:39 IST
Last Updated 13 ಸೆಪ್ಟೆಂಬರ್ 2013, 9:39 IST

ರಟ್ಟೀಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಕನಾರ್ಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ತುಂಗಾ ಮೇಲ್ದಂಡೆ ಕಚೇರಿ ಎದುರಿಗೆ ಹಮ್ಮಿ ಕೊಂಡ ಅನಿರ್ದಿಷ್ಟಾವಧಿ ಪ್ರತಿಭಟನೆ ಯನ್ನು ಅಧಿಕಾರಿಗಳ ಭರವಸೆ ಮೇರೆಗೆ ಬುಧವಾರ ರಾತ್ರಿ 9 ಗಂಟೆಗೆ ಹಿಂತೆಗೆದುಕೊಳ್ಳಲಾಯಿತು.

ವಿಶೇಷ ಭೂಸ್ವಾಧೀನಾಧಿಕಾರಿ ಇಸ್ಮಾಯಿಲ್ ಶಿರಹಟ್ಟಿ ರೈತರನ್ನು ಉದ್ದೇಶಿಸಿ ಮಾತನಾಡಿ ಧಾರವಾಡದ ಸಿಇಒ ಅವರನ್ನು ಸಂಪರ್ಕಿಸಿ ರೈತರಿಗೆ ದೊರೆಯಬೇಕಾದ ಪರಿಹಾರವನ್ನು ಎಂಟು ದಿನಗಳೊಳಗಾಗಿ ಚೆಕ್‌ ಮೂಲಕ ವಿತರಿಸುವಂತೆ ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ಈ ಹಂತದಲ್ಲಿ ಕೆಲ ರೈತರು ಕೂಡಲೇ ಚೆಕ್‌ ವಿತರಿಸುವಂತೆ ಆಗ್ರಹಿಸಿದಾಗ ಅವರನ್ನು ಸಮಾಧಾನಪಡಿಸಿದ ಅಧಿಕಾರಿಗಳು ರೈತರಿಂದ ಅರ್ಜಿ ಸ್ವೀಕರಿಸಿದ ನಂತರ ಹಣ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ಧನ ಗೌಡ ಪಾಟೀಲ ಮಾತನಾಡಿ ರೈತರ ಮೇಲಿನ ಮೊಕದ್ದಮೆಗಳನ್ನು ಹಿಂತೆಗೆದು ಕೊಳ್ಳಬೇಕು. ವಿನಾ ಕಾರಣ ರೈತರನ್ನು ಅಲೆದಾಡುವಂತೆ ಮಾಡ ಬೇಡಿ. ಅಧಿಕಾರಿಗಳು ಪದೇ ಪದೇ ವರ್ಗಾವಣೆ ಆಗುವುದರಿಂದ ರೈತರಿಗೆ ತೊಂದರೆ ಆಗುತ್ತಿದೆ. ಕಾಯಂ ಅಧಿಕಾರಿಗಳನ್ನು ನೇಮಿಸಿಕೊಳ್ಳಬೇಕು. ಮನವಿಯಲ್ಲಿ ಹೇಳಿರುವಂತೆ 19 ಗ್ರಾಮಗಳ ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಬೇಕು. ಇಲ್ಲದಿದ್ದರೆ ಮುಂದಿನ ಗುರುವಾರ ಕಚೇರಿ ಎದುರಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗು ವುದು. ಸಹಾಯಕ ಹಾಗೂ ಕಾರ್ಯ ಪಾಲಕರ ಕಚೇರಿಯನ್ನು ಸ್ಥಳಾಂತರಿಸ ಬಾರದು. ಕಾಲುವೆ ಸಮೀಪವಿರುವ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ತಿಳಿಸಿದರು.

ಯೋಜನೆಯ ಎಂಜಿನಿಯರ್‌ ಓಲೇಕಾರ, ಜಿಲ್ಲಾ ಗೌರವಾಧ್ಯಕ್ಷ ಗದಿಗೆಪ್ಪ ದಾನಮ್ಮನವರ, ತಾಲ್ಲೂಕು ಅಧ್ಯಕ್ಷ ರಾಜಶೇಖರ ದೂದಿಹಳ್ಳಿ, ಕಾರ್ಯದರ್ಶಿ ಮಲ್ಲನಗೌಡ ಸೊರಟೂರ, ಪರಸಪ್ಪ ಪುಟ್ಟಕ್ಕಳವರ, ಬಸಣ್ಣ ಬಳಗಾವಿ, ಜಗದೀಶ ಲಕ್ಕನ ಗೌಡ್ರ, ಬೀರಪ್ಪ ಪೂಜಾರ, ಲೋಕಪ್ಪ ಹುಲ್ಲತ್ತಿ, ಉಮೇಶ ಹೊಸಮನಿ, ಶಿವನಗೌಡ ಪಾಟೀಲ, ಶಿವನಗೌಡ ದೊಡ್ಡಗೌಡ್ರ, ವೀರನಗೌಡ ಪ್ಯಾಟಿ ಗೌಡ್ರ, ಪಿ.ಬಿ.ದ್ಯಾವಕ್ಕಳವರ, ಲಕ್ಷ್ಮಣ ಅಸ್ವಾಲಿ, ವೀರಪ್ಪ ಬೆನ್ನೂರ, ಚಂದ್ರು ಜೋಗಿಹಳ್ಳಿ, ರುದ್ರಪ್ಪ ಕೋಟಿ ಹಾಳ, ಶಿವಲಿಂಗಪ್ಪ ದ್ಯಾವಕ್ಕಳವರ ಅಲ್ಲದೆ ಕಡೂರ, ಕಣವಿಸಿದ್ಗೇರಿ, ಹಿರೇ ಮೊರಬ, ಮೈದೂರ, ಚಿಕ್ಕಕಬ್ಬಾರ, ಹಿರೇಕಬ್ಬಾರ, ಸತ್ತಿಗೀಹಳ್ಳಿ, ಶಿರಗಂಬಿ, ಮಳಗಿ, ಪರ್ವತಸಿದ್ಗೇರಿ, ಮಕರಿ, ದೊಡ್ಡಗುಬ್ಬಿ, ಮಾವಿನತೋಪ, ನೆಶ್ವಿ ಮುಂತಾದ 19 ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾರ್ಮಿಕರ ಪ್ರತಿಭಟನೆ
ಬ್ಯಾಡಗಿ:
ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ವೈದ್ಯರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ಆರೋಪಿಸಿ  ಕೂಲಿ ಕಾರ್ಮಿಕರ ಸಂಘಟನೆಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಗುರುವಾರ ನಡೆದಿದೆ.

ಪ್ರತಿಭಟನೆಯಲ್ಲಿ ಗಣೇಶ ನಾಗನಗೌಡ್ರ, ಗಣೇಶ ಹೊಸಮನಿ, ಪುಷ್ಪಾ ಹರಿಜನ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.