ADVERTISEMENT

`ಯೋಧರ ಧೈರ್ಯ ಮೈಗೂಡಿಸಿಕೊಳ್ಳಿ'

ಹೊಸಮಠ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 27 ಜುಲೈ 2013, 6:35 IST
Last Updated 27 ಜುಲೈ 2013, 6:35 IST
ಹಾವೇರಿಯ ಹೊಸಮಠ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯೋಧ ಮಹಮ್ಮದ್ ಖವಾಸ್ ಮಾತನಾಡಿದರು. ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ, ಉಪಪ್ರಾಚಾರ್ಯ ಎಂ.ಆರ್.ಚವ್ಹಾಣ ಮತ್ತಿತರರು ಚಿತ್ರದಲ್ಲಿದ್ದಾರೆ.
ಹಾವೇರಿಯ ಹೊಸಮಠ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯೋಧ ಮಹಮ್ಮದ್ ಖವಾಸ್ ಮಾತನಾಡಿದರು. ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ, ಉಪಪ್ರಾಚಾರ್ಯ ಎಂ.ಆರ್.ಚವ್ಹಾಣ ಮತ್ತಿತರರು ಚಿತ್ರದಲ್ಲಿದ್ದಾರೆ.   

ಹಾವೇರಿ: `ಧೀರತನ, ಧೈರ್ಯ, ಸಾಹಸ ದೊಂದಿಗೆ ದೇಶದ ರಕ್ಷಣೆಗಾಗಿ ಪ್ರಾಣ ತೆತ್ತ ಮಹಾಯೋಧರ ಸ್ಮರಿಸುವುದರ ಜತೆಗೆ ಅವರ ಆದರ್ಶಗಳನ್ನು ಮೈಗೂ ಡಿಸಿಕೊಳ್ಳಲು ಯುವ ಸಮುದಾಯ ಮುಂದೆ ಬರಬೇಕು' ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ನಿವೃತ್ತನಾದ ಜಿಲ್ಲೆಯ ಏಕೈಕ ಯೋಧ ಮಹಮ್ಮದ್ ಜಹಾಂಗೀರ್ ಖವಾಸ್ ಹೇಳಿದರು.

ಶುಕ್ರವಾರ ನಗರದ ಹೊಸಮಠದ ಪಿಯುಸಿ ಕಾಲೇಜಿನಲ್ಲಿ ಸಹಯೋಗದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ 14ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾವು 19 ವರ್ಷಗಳ ಕಾಲ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ನಿವೃತ್ತಿಗೆ ಕೇವಲ ಒಂದು ವರ್ಷ ಇದ್ದಾಗ ಪಾಕಿಸ್ತಾನ ಜತೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ದಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಸುಮಾರು ಮೂರು ತಿಂಗಳ ಕಾಲ ನಡೆದ ಯುದ್ಧದಲ್ಲಿ ಶತ್ರು ಸೈನ್ಯ ವನ್ನು ಹಿಮ್ಮೆಟ್ಟಿಸಿ ವಿಜಯ ಸಾಧಿಸುವಲ್ಲಿ ನಾವು ಯಶಸ್ವಿಯಾದೆವು. ಅದು ಇಂದಿಗೂ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಜಮ್ಮು ಕಾಶ್ಮೀರದ ಶ್ರೀನಗರದಿಂದ ಪ್ರಾರಂಭವಾದ ಕಾರ್ಗಿಲ್ ಯುದ್ಧವು ಕಾರ್ಗಿಲ್ ಪ್ರದೇಶವನ್ನು ಉಳಿಸುವುದ ರಲ್ಲಿ ಮಹತ್ವದ ಪಾತ್ರ ವಹಿಸಿದ್ದೇವೆ. ಈ ಯುದ್ಧದಲ್ಲಿ ನಮ್ಮ ಅನೇಕ ಸ್ನೇಹಿತರು ಪ್ರಾಣ ಕೊಟ್ಟು ದೇಶವನ್ನು ಉಳಿ ಸಿದ್ದಾರೆ. ಅಂತಹ ದೇಶ ಭಕ್ತರ ಜೀವನ, ಸಾಧನೆ, ಸಾಹಸ, ಧೈರ್ಯ ಪ್ರತಿಯೊಬ್ಬ ರಿಗೂ ಮಾರ್ಗದರ್ಶನ ವಾಗಬೇಕು ಎಂದು ಹೇಳಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ಮಾತನಾಡಿ, ಅಖಿಲ ಭಾರತೀಯ ವಿಧ್ಯಾರ್ಥಿ ಪರಿ ಷತ್ ಪ್ರತಿ ವರ್ಷ ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ ಆಚರಿ ಸುತ್ತಾ ಬಂದಿದೆ. ಪ್ರಾಣ ಕೊಟ್ಟು ಕಾರ್ಗಿಲ್ ಉಳಿಸಿರುವುದರಲ್ಲಿ ಮಹತ್ವದ ಪಾತ್ರ ವಹಿಸಿರುವ ವೀರ ಯೋಧರ ಆತ್ಮಕ್ಕೆ ಶಾಂತಿ ಕೋರುವು ದರ ಜತೆಗೆ ಅವರ ಮಹತ್ವನ್ನು   ಇಂದಿನ ಯುವಕರಿಗೆ ತಿಳಿಸಿ ಕೊಡುವುದೇ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಚಾರ್ಯ ಎಂ. ಆರ್. ಚವ್ಹಾಣ ಮಾತನಾಡಿ, ದೇಶ ಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿರುವ ವೀರ ಯೋಧರ ಜೀವನ ಸಾಧನೆಗಳು ಯುವಕರಲ್ಲಿ ದೇಶ ಭಕ್ತಿ ಮೂಡಿ ಸುವಲ್ಲಿ ಸಹಕಾರಿಯಾಗಲಿವೆ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಹಾವೇರಿ ಯೋಧ ಖವಾಸ್ ಅವರು ಕಾರ್ಗಿಲ್ ಯುದ್ಧದ ಘಟನಾವಳಿ ಗಳನ್ನು ತಿಳಿಸುವ ಮೂಲಕ ಯುವ ಜನರಲ್ಲಿ ಸ್ಪೂರ್ತಿ ತುಂಬಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್. ಹಾನಗಲ್, ಗಣೇಶ ಹೆಂಬಲಿ, ಯಶ ವಂತ್ ಗಿತ್ತೆ ಹಾಗೂ ಕಾಲೇಜಿನ ನೂರಾರು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಪುಟ್ಟರಾಜ ಮುಗಳಿ ಸ್ವಾಗತಿಸಿದರು. ನಾಗರಾಜ ಹುರಳಿಕುಪ್ಪ ನಿರೂಪಿಸಿ ದರು. ದೀಪಕ ಹೆಬ್ಬಾರಿ ವಂದಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.