ADVERTISEMENT

ವಿವೇಕಾನಂದ ಜಯಂತ್ಯುತ್ಸವದಲ್ಲಿ ಸಚಿವ ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 9:15 IST
Last Updated 26 ಫೆಬ್ರುವರಿ 2012, 9:15 IST

ರಾಣೆಬೆನ್ನೂರು: ಸದೃಢ ಸಮಾಜ ಕಟ್ಟಲು ಪ್ರತಿಯೊಬ್ಬ ಯುವಕರು ಸಮಾಜಕ್ಕೆ ಆಸ್ತಿಯಾಗ ಬೇಕು,  ನಾವು ಸಮಾಜಕ್ಕೆ ಸಮಸ್ಯೆ ಯಾಗ ಬಾರದು, ಪ್ರತಿ ವ್ಯಕ್ತಿ ನನ್ನ ಬಂಧು ಎಂದು ಕಾರ್ಯ ನಿರ್ವಹಿ ಸಬೇಕು ಇದು ಸ್ವಾಮಿ ವಿವೇಕಾನಂದರಿಗೆ ತೋರಿಸುವ ಗೌರವ ಎಂದು ನಗರಾಭಿವೃದ್ಧಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಸುರೇಶಕುಮಾರ ಹೇಳಿದರು.

ನಗರದ ಮಾಗೋಡ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ವರ್ಷಾಚರಣೆ ಹಾಗೂ ಯುವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ ದರು.
ಷಿಕಾಗೋದಲ್ಲಿ ಮಾಡಿದ 3 ನಿಮಿಷದ ಭಾಷಣ ಇಡೀ ಜಗತ್ತೇ ಭಾರತದತ್ತ ನೋಡುವಂತೆ ಮಾಡಿತು, ಅಂತಹ ಧೀಮಂತ ವ್ಯಕ್ತಿಯಾಗಿದ್ದರು ಸ್ವಾಮಿ ವಿವೇಕಾನಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆಯನ್ನು ದೇಶದ ಆಚರಣೆ ಮಾಡಬೇಕು, ಶಾಲಾ ಕಾಲೇಜುಗಳಿಗೆ ಮನೆ ಮಠಗಳಿಗೆ ತಲುಪಿ ಸಬೇಕು, ಮನುಷ್ಯನ ಪರಿವರ್ತನೆಗೊಳಿಸುವ ಯಜ್ಞದ ಕಾರ್ಯವಾಗಬೇಕು ಎಂದರು.

ಯುವಕರು ಓದುವುದು ಮುಗಿದ ಮೇಲೆ ಸರ್ಕಾರಿ ಉದ್ಯೋಗಕ್ಕೆ ಮಾರುಹೋಗದೆ ಸ್ವಾವಲಂಬಿಗಳಾಗಿ ಬದುಕುವಂತಾಗಬೇಕು ಎಂದು ಸಚಿವರು ತಿಳಿಸಿದರು. ಗದಗ -ಬಿಜಾಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಅವರು ಮಾತನಾಡಿ, ಯಾವ ಬಗೆಯ ಶಿಕ್ಷಣದಿಂದ ಶೀಲ ರೂಪಗೊಳ್ಳುವುದೋ ಮತ್ತು ಯಾವುದರಿಂದ ನಮ್ಮ ಸ್ವಂತ ಕಾಲ ಮೇಲೆ ನಾವು ನಿಂತುಕೊಳ್ಳುವಂತಹ ಶಿಕ್ಷಣ ನಮಗೆ ಅವಶ್ಯಕವಾಗಿದೆ. ಅವನತಿಗೆ ಇಳಿಯುತ್ತಿರುವ ಮಾನವ ಜನಾಂಗಕ್ಕೆ ನವ ಚೇತನವನ್ನು ತುಂಬಲು ಮೊತ್ತೊಮ್ಮೆ ಆ ಪ್ರವಾಹ ಉಕ್ಕಿ ಹರಿಯಬೇಕಾಗಿದೆ ಎಂದರು.

ಯುವ ಜನಾಂಗ ಸ್ವಾಮಿ ವಿವೇಕಾನಂದ ಅವರನ್ನು ಹೀರೋ ಮಾಡಿಕೊಳ್ಳಬೇಕು. ಒಬ್ಬ ಲಾರಿ ಚಾಲಕ ಸ್ವಾಮಿವಿವೇಕಾನಂದರ ಎರಡು ಪುಟ ಓದಿ ದಿಢೀರನೇ ಇಡಿ ರಾಷ್ಟ್ರ ಮೆಚ್ಚುವಂತ ವ್ಯಕ್ತಿಯಾಗುತ್ತಾನೆ ಎಂದರೆ ಇನ್ನೆಂಥವರು ಬೇಕು ಎಂದು ಯುವಕರನ್ನು ಪ್ರಶ್ನಿಸಿದರು.

ಯುವ ಜನರನ್ನು ಒಂದುಗೂಡಿಸಿ ಸಂಘಬದ್ಧರಾಗಿ ದುಡಿಯುವಂತೆ ಮಾಡಲು ಸ್ವಾಮಿ ವಿವೇಕಾನಂದರು ಜನ್ಮ ತಾಳಿದ್ದರು, ಅವರ ಸಂಪೂರ್ಣ ಭರವಸೆ ಯುವ ಜನಾಂಗದ ಮೇಲೆ ಇತ್ತು, ಭಾರತ ವರ್ಷದ ಉದ್ದಾರ ಭಾರತೀಯರಿಂದಲೇ ಆಗಬೇಕಾಗಿದೆ ಎಂದರು.


ಬೆಂಗಳೂರು ರಾಮಕೃಷ್ಣ ಮಠದ ಹರ್ಷಾನಂದಜೀ ಮಹಾರಾಜ್, ಮೈಸೂರು ರಾಮಕಷ್ಣ ಮಠದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ತುಮಕೂರು ಡಾ. ವೀರೇಶಾನಂದಜೀ ಸರಸ್ವತಿ ಮಹಾರಾಜ್, ಬೆಳಗಾವಿ ಸ್ವಾಮಿ ರಾಘವೇಂಶಾನಂದಜೀ ಮಹಾರಾಜ್ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ, ನಗರಸಭೆ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಪೌರಾಯುಕ್ತ ಎಂ.ಎಂ. ಕರಭೀಮಣ್ಣನವರ, ಡಾ.ಆರ್.ಎಂ. ಕುಬೇರಪ್ಪ,  ಎ.ಎಂ. ನಾಯಕ, ವಿ.ಬಿ,. ಗಂಗನ ಗೌಡ್ರ, ನಾಗರಾಜ ಲಕ್ಷ್ಮೇಶ್ವರ, ನಾರಾಯಣ ಮೆಹರವಾಡೆ, ಈಶ್ವರ ಹಾವ ನೂರು, ವೆಂಕಟೇಶ ತೊಗಟವೀರ, ಡಿ.ಸಿ. ಕುಲ ಕರ್ಣಿ, ಎಂ.ಎಸ್.ಅರಕೇರಿ, ಟಿ.ಸಿ.ಪಾಟೀಲ, ಡಾ. ಮೋಹನ ಹಂಡೆ, ಡಾ. ಬಸವರಾಜ ಅಂಗಡಿ, ನಾಗರಾಜ ಲಕ್ಷ್ಮೇಶ್ವರ, ಟಿ.ಎಂ. ವೆಂಕಟ ಗೌಡ, ಡಾ. ಆರ್.ಎಂ. ಕುಬೇರಪ್ಪ, ಡಾ. ಬಸವರಾಜ ಕೇಲ ಗಾರ, ಎನ್. ಬಿ. ವೀರನಗೌಡ, ಶ್ರೀನಿವಾಸ ಲದ್ವಾ, ವಾಸುದೇವ ಗುಪ್ತಾ, ಮಹ ದೇವಪ್ಪ ಖನ್ನೂರು,ಎಸ್.ಜಿ. ಮುಂಡರಗಿ, ಕೆ.ವಿ. ಪ್ರಸಾದ  ಹಾಜರಿದ್ದರು.

ಹುಬ್ಬಳ್ಳಿ ಸ್ವಾಮಿ ರಘುವೀರಾನಂದಜೀ ಮಹಾ ರಾಜ್ ಸಂಕೀರ್ತನೆ ನಡೆಸಿದರು. ಸ್ವಾಮಿ ಪ್ರಕಾಶಾ ನಂದಜೀ ಮಹಾರಾಜ್ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಡಾ. ನಾಗರಾಜ ದೊಡ್ಮನಿ ಅತಿಥಿಗಳನ್ನು ಪರಿಚಯಿಸಿದರು. ಎಸ್. ಬಿ. ಮಲ್ಲೂರು ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.