ADVERTISEMENT

ವಿಶೇಷ ವಿಜ್ಞಾನ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 5:30 IST
Last Updated 1 ಮಾರ್ಚ್ 2012, 5:30 IST

ರಟ್ಟೀಹಳ್ಳಿ: ಇಲ್ಲಿಗೆ ಸಮೀಪದ ಕಡೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ  ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ದಿನಾಚರಣೆ ಅಂಗವಾಗಿ ಪವಾಡ ಬಯಲು ಪ್ರದರ್ಶನ, ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸಿ.ವಿ. ರಾಮನ್ ಜೀವನ ಚರಿತ್ರೆ ಉಪನ್ಯಾಸ ಕಾರ್ಯಕ್ರಮ ಜರುಗಿದವು.

ವಿದ್ಯಾರ್ಥಿನಿ ರೇಖಾ ಹೊನ್ನಾಳಿ ಎಣ್ಣೆಯಿಲ್ಲದ, ನೀರಿನಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ದು ಎಲ್ಲರನ್ನು ಅಚ್ಚರಿಯಲ್ಲಿ ಮುಳುಗಿಸಿತ್ತು.

    ಪವಾಡ ಬಯಲು ಪ್ರದರ್ಶನ ನಡೆಸಿದ ಗಣಿತ ಶಿಕ್ಷಕ ಎಂ.ಎಂ.ಕೆರೂರ ಮಾತನಾಡಿ ಇಂದಿನ ಆಧುನಿಕ ಜಗತ್ತಿನಲ್ಲಿ ಜನತೆಯ ಅಜ್ಞಾನವನ್ನೇ ಬಂಡವಾಳವನ್ನಾಗಿ  ಮಾಡಿಕೊಂಡು ಜನರನ್ನು ನಂಬಿಸುತ್ತಾ ಇಲ್ಲ-ಸಲ್ಲದ ಪವಾಡ ಮಾಡುತ್ತೇನೆಂದು ಹೇಳುತ್ತಾ  ವಂಚಿಸುತ್ತಿರುವುದು ಅಜ್ಞಾನದ ಪರಮಾ ವಧಿ  ಎನ್ನಬಹುದು. ಜನರು ಎಲ್ಲವನ್ನು ವೈಜ್ಞಾನಿಕ ತಳಹದಿಯ ಮೇಲೆ ವಿಶ್ಲೇಷಿಸುವುದು ಒಳ್ಳೆಯದು. ಎಣ್ಣೆಯಿಲ್ಲದ ದೀಪ ಉರಿಸುವುದು.

ತೆಂಗಿನಕಾಯಿ ಯಲ್ಲಿ ಹೂವು ಪತ್ರಿ ಅರಳುವುದು. ಜಲವನ್ನು ಕಂಡು ಹಿಡಿಯುವುದು ಇವೆಲ್ಲವೂ ಸುಳ್ಳು. ಭೂಮಿಯ ಅಂತರಾಳದಲ್ಲಿ  ನೀರಿದೆ ಎಂಬುವುದನ್ನು ಕಂಡು ಹಿಡಿಯಲು ವಿಜ್ಞಾನಕ್ಕೆ ಸವಾಲಾಗಿರುವ ಈ ಪರಿಸ್ಥಿತಿಯಲ್ಲಿ ಕೇವಲ ಒಂದು ತೆಂಗಿನಕಾಯಿಯಿಂದ ಕಂಡು ಹಿಡಿಯುತ್ತೆನೆ ಎಂಬುದು ಪರಿಶುದ್ಧಹಾಸ್ಯದ ಸಂಗತಿಯಾಗಿದೆ. ಎಂದು ತಿಳಿಸಿದರು.

ಗಣಿತದ ದ್ವಾದಶ ಘನಾಕೃತಿ, ಚತುರ್ಮುಖ ಘನಾ ಕೃತಿ, ಅಷ್ಟಮುಖ ಘನಾಕೃತಿ, ಷಣ್ಮುಖ ಘನಾಕೃತಿ, 20 ಮುಖವುಳ್ಳ ವಿಷಂತಿ ಘನಾಕೃತಿಯನ್ನು ಕೇವಲ ಕಾಗದ ವನ್ನು ಮಡಿಚುವುದರ ಮೂಲಕ ಹೇಗೆ ರಚಿಸಿ ಬಹುದೆಂಬುದನ್ನು ಸಮಗ್ರವಾಗಿ ತಿಳಿಸಿದರು.

ಪವಾಡ ಬಯಲು ಪ್ರದರ್ಶನದಲ್ಲಿ ಎಣ್ಣೆಯಿಲ್ಲದ ದೀಪ ಉರಿಯುವುದು, ಗುರುತ್ವ ಚಲನೆ, ಪ್ರಚ್ಛನ್ನ ಶಕ್ತಿ, ತುಂತುರು ನೀರಾವರಿ, ಹಾಲಿನ ಪರೀಕ್ಷೆ, ಬಾಯಲ್ಲಿ ಕರ್ಪೂರ ನುಂಗುವುದು, ತೆಂಗಿನಕಾಯಿ ಯಿಂದ ಜಲ ಪರೀಕ್ಷೆ, ಕಾಯಿಯಿಂದ ಹೂವು ಪತ್ರಿ ಅರಳುವುದು, ಬಾಟಲ್‌ನಲ್ಲಿಯಲ್ಲಿ ದೆವ್ವಗಳನ್ನು ಬಂಧಿಸುವುದು, ತಣ್ಣನೆಯ ನೀರಿನಲ್ಲಿ  ಬೆಂಕಿಯಿಲ್ಲದೇ ಅನ್ನವನ್ನು ಮಾಡುವುದು, ಕೆಂಡ ಹಾಯವುದು, ಇದ್ದಕ್ಕಿ ್ದದಂತೆ ಬೆಂಕಿ ಹತ್ತಿಕೊಳ್ಳುವುದು  ಇನ್ನೂ ಮುಂತಾದವುಗಳನ್ನು ವೈಜ್ಞಾನಿಕವಾಗಿ ತೋರಿಸಿದರು. ವಿದ್ಯಾರ್ಥಿಗಳ ಸಂಯೋಷಕ್ಕೆ ಮಿತಿಯೇ ಇರಲಿಲ್ಲ. ಕರತಾಡನ ಮೂಲಕ ತಮ್ಮ ಸಂತೋಷ  ಪಟ್ಟರು.

ಮುಖ್ಯ ಶಿಕ್ಷಕ ಎನ್.ಕೆ.ಪಾಟೀಲ.ಎಂ.ಎಂ.ಕೆರೂರ. ಎನ್.ಕೆ. ಸಿಂಗಾಪೂರ, ಎಂ.ಸಿ. ತುಮ್ಮಿನಕಟ್ಟಿ, ಎಂ.ಎಸ್.ಕೂನಬೇವು. ಎಸ್.ಎಂ.ಪಟ್ಟಣಶೆಟ್ಟಿ, ಎಸ್. ಆರ್. ಮರೆಗುದ್ದಿ   ಭಾಗವಹಿಸಿ ದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.