ADVERTISEMENT

ವೇತನ ಪರಿಷ್ಕರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 5:59 IST
Last Updated 17 ಸೆಪ್ಟೆಂಬರ್ 2013, 5:59 IST

ರಾಣೆಬೆನ್ನೂರು: ಕರ್ನಾಟಕ ರಾಜ್ಯ ಸರ್ಕಾರಿ ಇಲಾಖೆಯ ಗ್ರಾಮ ಸಹಾ­ಯಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗ್ರಾಮ ಸಹಾಯಕರ ಹುದ್ದೆಯನ್ನು ‘ಡಿ‘ ದರ್ಜೆ ನೌಕರರೆಂದು ಪರಿಗಣಿಸಿ ವೇತನ ಪರಿಷ್ಕರಣೆ ಮಾಡ­ಬೇಕು ಎಂದು ಒತ್ತಾಯಿಸಿ ಸೋಮ­ವಾರ ಪ್ರತಿಭಟನೆ ನಡೆಸಿ ಉಪತ­ಹಶೀ­ಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರೆಂದು ಪರಿಗಣಿಸಿ ₨ 9,600 ರಿಂದ ₨14,550 ವೇತನ ನಿಗದಿಪ­ಡಿಸ­ಬೇಕು. ನಿವೃತ್ತಿ ಹೊಂದಿದವರಿಗೆ ರೂ 1ಲಕ್ಷ  ವರೆಗೆ ಪರಿಹಾರ ಧನ ನೀಡ­ಬೇಕು. ಅಲ್ಲದೆ ಪ್ರತಿ ತಿಂಗಳು ಪಿಂಚಣಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮ ಸಹಾಯಕ ನಿಂಗಪ್ಪ ಅಂಕಸಾಪುರ ಮಾತನಾಡಿದರು. ಶಫೀ ಪಠಾಣ, ಹನುಮಂತಪ್ಪ  ಓಲೇಕಾರ, ಗಜೇಂದ್ರ ದೊಡ್ಡಮನಿ, ನಿಂಗಪ್ಪ ಸೇರಿದಂತೆ ನೂರಾರು ಗ್ರಾಮ ಸಹಾಯಕರು ಉಪಸ್ಥಿರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.