ಗದಗ: ಸೀರೆ ಮತ್ತು ಹಣಕ್ಕಾಗಿ ರಾಜ ಕಾರಣ ಮಾಡದಂತೆ ಬಿಜೆಪಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷ ಶಶಿಕಲಾ ಜೊಲ್ಲೆ ಅವರು ಮಹಿಳೆಯರಿಗೆ ಸಲಹೆ ನೀಡಿದರು.
ನಗರದಲ್ಲಿ ಮಂಗಳವಾರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಭಾರತ ಗೆಲ್ಲಿಸಿ ಮಹಿಳಾ ಸಮಾವೇಶ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಂಪ್ಯೂಟರ್ ಮತ್ತು ವೈಜ್ಞಾನಿಕ ಯುಗದಲ್ಲೂ ಮಹಿ ಳೆಯರೂ ಕಷ್ಟ ಅನುಭವಿಸುವುದು ತಪ್ಪಿಲ್ಲ. ಸೀಮೆಎಣ್ಣೆ, ಅಡುಗೆ ಅನಿಲ, ಸಕ್ಕರೆ, ಹಾಲು ಸೇರಿದಂತೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹತ್ತು ವರ್ಷ ಆಳಿದ ಯುಪಿಎ ಸರ್ಕಾರಕ್ಕೆ ಬೆಲೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದರು.
ಗಡಿಯಲ್ಲಿ ದೇಶದ ಯೋಧರ ರುಂಡ ಕತ್ತರಿಸಿ ಬಿಸಾಡಿದರು. ಪ್ರಧಾನಿ ಮನಮೋಹನ ಸಿಂಗ್ ಚಕಾರವೆತ್ತುವುದಿಲ್ಲ. ಸಾಕಷ್ಟು ಹಗರಣಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈಗ ಬದಲಾವಣೆ ಅವಶ್ಯಕತೆ ಇದೆ. ಮೋದಿ ಪ್ರಧಾನಿ ಆದರೆ ಮಾತ್ರ ದೇಶಕ್ಕೆ ಉಳಿಗಾಲ ಎಂದು ಅವರು ಅಭಿಪ್ರಾಯಪಟ್ಟರು.
ದಿನನಿತ್ಯ ಪತ್ರಿಕೆ, ಟಿ.ವಿ.ಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ವರದಕ್ಷಿಣೆ ಸಾವು ನೋಡುತ್ತಿರುತ್ತೇವೆ. ಕೇಂದ್ರ ಸರ್ಕಾರ ಮಹಿಳೆಯರ ಸುರಕ್ಷತೆಗೆ ಸೂಕ್ತ ಕಾನೂನು ತರುವಲ್ಲಿ ವಿಫವಾಗಿದೆ ಎಂದು ಆರೋಪಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ, ದೇಶದಲ್ಲಿ ಲಕ್ಷಕ್ಕೂ ಹೆಚ್ಚು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಗಂಟೆಗೆ ಒಂದು ವರದಕ್ಷಿಣೆ ಸಾವು ಸಂಭವಿಸು ತ್ತಿದೆ. ಇಷ್ಟಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ರಕ್ಷಣಾ ಕ್ರಮ ಕೈಗೊಂಡಿಲ್ಲ. ಸಮಾನತೆ ಕುರಿತು ಮಾತ ನಾಡುವ ನಾವು ಹೆಣ್ಣು ಮತ್ತು ಗಂಡಿಗೆ ಸಮಾನ ಕೂಲಿ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಗೃಹಿಣಿಗೆ ಗಂಡಸಿನ ಸಂಬಳದ ಪಾಲು ನೀಡುವ ಕಾನೂನು ಬಂದರೂ ಅಚ್ಚರಿಯಿಲ್ಲ ಎಂದು ನುಡಿದರು.
ಮಹಿಳೆ ಆರ್ಥಿಕವಾಗಿ ಸ್ವಾವಲಂಬನೆ ಹೊಂದಿದಾಗ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ. ಅರವತ್ತು ವರ್ಷ ಕಾಂಗ್ರೆಸ್ ದೇಶ ಆಳಿದೆ. ಮೋದಿಗೆ ಅವಕಾಶ ನೀಡಿದರೆ ದೇಶವನ್ನು ಅಭಿ ವೃದ್ಧಿ ಪಥದತ್ತ ಕೊಂಡೊಯ್ಯಬಲ್ಲರು ಎಂದು ತಿಳಿಸಿದರು.
ಶಿರಹಟ್ಟಿಯ ನೀಲಮ್ಮ ಎಂಬುವರು ಮೋದಿ ಕುರಿತು ರಚಿಸಿದ್ದ ಜಾನಪದ ಗೀತೆ ಹಾಡಿದರು.
ಸಮಾವೇಶದಲ್ಲಿ ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಶ್ರೀಶೈಲಪ್ಪ ಬಿದರೂರ, ವಿಧಾನ ಪರಿಷತ್ ಸದಸ್ಯ ಶಿವರಾಜ್ ಸಜ್ಜನರ, ಜಿ.ಪಂ. ಅಧ್ಯಕ್ಷೆ ಕಮಲವ್ವ ಸಜ್ಜನರ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಸದಸ್ಯ ಎಂ. ಎಸ್.ದೊಡ್ಡಗೌಡರ, ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ಉಗಲಾಟ, ಎಂ.ಎಸ್. ಕರಿ ಗೌಡರ, ರಾಧಾಬಾಯಿ, ಭಾರತಿ, ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ, ವಂದನ ವೇರ್ಣೇಕರ, ನಗರಸಭೆ ಸದಸ್ಯೆ ಪಾರ್ವತಿ ಹಾಜರಿದ್ದರು.
24ರಂದು ನಾಮಪತ್ರ ಸಲ್ಲಿಕೆ
ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇದೇ 24ರಂದು ನಾಮಪತ್ರ ಸಲ್ಲಿಸಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ದೇಶದ 80 ಕೋಟಿ ಯುವಕರಲ್ಲಿ 18 ವರ್ಷದೊಳಗಿನವರೇ 40 ಕೋಟಿ ಇದ್ದಾರೆ. ಉದ್ಯೋಗ, ಶಿಕ್ಷಣ ಮತ್ತು ಕೃಷಿ ನೀತಿ ಜಾರಿಯಾಗಬೇಕು. ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರಿಂದಲೇ ಬೆಲೆ ಏರಿಕೆ ನಿಯಂತ್ರಿಸಲು ಆಗಲಿಲ್ಲ. ದೇಶದಲ್ಲಿ ಬಂಡವಾಳ ಹೂಡಲು ಹೊರ ದೇಶದವರು ಬರುತ್ತಿಲ್ಲ ಎಂದರು.
ಕ್ಷೇತ್ರದ ವ್ಯಾಪ್ತಿಗೆ ಬರುವ 870 ಹಳ್ಳಿಗಳಿಗೆ ಭೇಟಿ ನೀಡಲು ಆಗದೇ ಇರ ಬಹುದು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಹಾವೇರಿ ಯಲ್ಲಿ ಫ್ಲೈ ಓವರ್ ನಿರ್ಮಿಸಲಾಗಿದೆ. ಅದೇ ರೀತಿ ಈ ಬಾರಿ ಆಯ್ಕೆಯಾದರೆ ಗದಗದಲ್ಲೂ ನಿರ್ಮಿಸ ಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.