ADVERTISEMENT

ಹಿರೂರ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ವಾಲ್ಮೀಕಿ ಸಭಾ ಭವನದಲ್ಲಿ ಶೆಡ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 10:39 IST
Last Updated 22 ಮಾರ್ಚ್ 2018, 10:39 IST

ಹಾನಗಲ್: ತಾಲ್ಲೂಕಿನ ಹಿರೂರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ  ಗ್ರಾಮಗಳಲ್ಲಿ ಬುಧವಾರ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮನೋಹರ ತಹಸೀಲ್ದಾರ್‌ ಚಾಲನೆ ನೀಡಿದರು.

ಸಾವಿಕೇರಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆ ಅಡಿ ₹19.50 ಲಕ್ಷ ವೆಚ್ಚದ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ, ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ನಲ್ಲಿ ನೀರು ಸರಬರಾಜು ಯೋಜನೆ, ವಾಲ್ಮೀಕಿ ಸಭಾ ಭವನದಲ್ಲಿ ₹ 2.25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶೆಡ್‌ ಉದ್ಘಾಟಿಸಿದರು.

ನಂತರ ಬಾಳಿಹಳ್ಳಿ ಗ್ರಾಮದಲ್ಲಿ ₹12 ಲಕ್ಷ ವೆಚ್ಚದಲ್ಲಿ ನಲ್ಲಿ ನೀರು ಸರಬರಾಜು ಯೋಜನೆ, ₹4 ಲಕ್ಷ ವೆಚ್ಚದಲ್ಲಿ ಮಲ್ಲಿಕಾರ್ಜುನ ಸಭಾಭವನ,
₹2.25 ಲಕ್ಷದಲ್ಲಿ ನಿರ್ಮಾಣವಾದ ಬಸ್‌ ತಂಗುದಾಣ ಉದ್ಘಾಟಿಸಿದರು. ₹12 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ADVERTISEMENT

ನಂತರ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್‌ ಉತ್ತಮ ಆಡಳಿತ, ಸದೃಢ ನಾಯಕತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ನುಡಿದಂತೆ ನಡೆದು ಜನರ ಜನಮನ ಗೆದ್ದಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್‌ ಮಾತ ನಾಡಿ, ‘ಗ್ರಾಮೀಣ ಭಾಗದ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿ ಗಳನ್ನು ಜಿಲ್ಲಾ ಪಂಚಾಯ್ತಿ ಅನುದಾನ ದಲ್ಲಿ ಅನುಷ್ಠಾನಗೊಳಿಸಲಾಗಿದೆ’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹ್ಮದ್‌ ಸಾಧಿಕ್‌ ಶೇಷಗಿರಿ, ಮುಖಂಡರಾದ ಬಿ.ಶಿವಪ್ಪ, ಖಾದರ್‌ಮೊದ್ದೀನ್‌ ಶೇಕ್‌, ನಾಗರಾಜ ಈಳಿಗೇರ, ಬಸಣ್ಣ ಚೌಡಣ್ಣನವರ, ಫಕ್ಕಿರಪ್ಪ ಆಲೂರ, ನಾಗರಾಜ ದೊಡ್ಡಮನಿ, ಎಂಜನಿಯರ್‌ ಪಾಂಡುರಂಗಪ್ಪ ಇದ್ದರು.

ನಂತರ ಹರಳಕೊಪ್ಪ ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ 50 ಸಾವಿರ ಲೀಟರ್‌ ಸಾಮರ್ಥ್ಯದ ಮೇಲ್ಮಟ್ಟದ ಜಲಾಗಾರವನ್ನು ಶಾಸಕ ತಹಸೀಲ್ದಾರ್‌ ಉದ್ಘಾಟಿಸಿದರು. ಮೂಡೂರ ಗ್ರಾಮದಲ್ಲಿ 2 ಅಂಗನವಾಡಿ ಕಟ್ಟಡ ಉದ್ಘಾಟಿಸಿದರು.

ಸಮೀಪದ ಹಿರೂರ, ಆಡೂರ ಗ್ರಾಮಗಳಲ್ಲಿ ತಲಾ ₹13 ಲಕ್ಷದ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಮತ್ತು ವರ್ದಿ ಗ್ರಾಮದಲ್ಲಿ ₹16.25 ಲಕ್ಷದಲ್ಲಿ, ಬಿಂಗಾಪುರ ಗ್ರಾಮದಲ್ಲಿ ₹9.50 ಲಕ್ಷದಲ್ಲಿ, ಬೆಳಗಾಲಪೇಟೆ ಗ್ರಾಮದಲ್ಲಿ ₹15.75 ಲಕ್ಷದಲ್ಲಿ ಕಾಂಕ್ರೀಟ್‌  ರಸ್ತೆ ಕಾಮಗಾರಿಗಳಿಗೆ ಶಾಸಕ ಮನೋಹರ ತಹಸೀಲ್ದಾರ್‌ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.