ADVERTISEMENT

ಹಿರೇಮೊರಬ ಗ್ರಾಮದಲ್ಲಿ ಮಕ್ಕಳ ಗ್ರಾಮ ಸಭೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:14 IST
Last Updated 20 ಡಿಸೆಂಬರ್ 2012, 8:14 IST

ರಟ್ಟೀಹಳ್ಳಿ: ಪ್ರತಿಯೊಂದು ಗ್ರಾಮದಲ್ಲಿ ಶಾಲೆಯ ಸ್ವಚ್ಚತೆಯ ಬಗ್ಗೆ ವಿವಿಧ ಸಮಸ್ಯೆಗಳಿದ್ದು ಅವುಗಳನ್ನು ನಿವಾರಿಸುಲ್ಲಿ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳುತ್ತಿದೆ. ಆದರೆ, ಶಾಲಾ ಆವರಣದಲ್ಲಿ ಗಲೀಜು ಮಾಡುವವರು ಮಕ್ಕಳೆ ಆಗಿರುತ್ತಾರೆ. ಸ್ವಚ್ಛತೆ ಮಾಡುವುದನ್ನು ಅವರೇ ನಿರ್ವಹಿಸಿದರೆ ಸ್ವಾವಲಂಬನೆಯ ಪರಿಕಲ್ಪನೆ ಅರಿವಾಗುತ್ತದೆ. ಎಂದು ಗ್ರಾ.ಪಂ. ಸದಸ್ಯ ಹಾಲನಗೌಡ ಮುದಿಗೌಡ್ರ ನುಡಿದರು.

ಸಮೀಪದ ಹಿರೇಮೊರಬ ಗ್ರಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಮಕ್ಕಳ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶೌಚಾಲಯ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಕೂಡಾ ಬರುತ್ತಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ನಿಯಮವಿದೆ. ಆದರೆ, ಮಹಾತ್ಮಾ ಗಾಂಧೀಜಿಯವರೂ ಕೂಡಾ ಸ್ವತಃ ಶೌಚಾಲಯ ನಿರ್ವಹಣೆಯನ್ನು ತಾವೇ ಮಾಡಿಕೊಳ್ಳುತ್ತಿದ್ದರು.

ಇದನ್ನು ಮಕ್ಕಳಿಗೆ ಹೇಗೆ ತಿಳಿಸುತ್ತೀರಿ. ಶಾಲಾ ಆವರಣವನ್ನು ನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವುದು ಶಾಲಾ ನಿಯಮವೇ ಆಗಿದೆ. ನಮ್ಮ-ನಮ್ಮ ಸಮಸ್ಯೆಗಳಿಗೆ ಮತ್ತೊಬ್ಬರನ್ನು ದೂರುವುದು ಅರ್ಥವಿಲ್ಲ ಎಂದು ತಿಳಿಸಿದರು. ಶಿಕ್ಷಕ ಪಿ.ಎಚ್. ತಿಮಲಾಪುರ, ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು.

ತಾ.ಪಂ. ಸದಸ್ಯ ಸೋಮಪ್ಪ ಸಿದ್ಲಿಂಗಪ್ಪನವರ, ಗ್ರಾ.ಪಂ. ಅಧ್ಯಕ್ಷೆ ಕುಸುಮವ್ವ ಕೆಳಗಿನಮನಿ, ಗ್ರಾ.ಪಂ. ಉಪಾಧ್ಯಕ್ಷ ಮಂಜಪ್ಪ ಮಡಿವಾಳರ, ಗ್ರಾ.ಪಂ. ಸದಸರಾದ್ಯ ಹಾಲನಗೌಡ ಮುದಿಗೌಡ್ರ, ವೀರಪ್ಪ ಗುರಪ್ಪನವರ, ಖಾಸೀಂಸಾಬ್ ರಟ್ಟೀಹಳ್ಳಿ,  ನಿಂಬವ್ವ ಚೀಲೂರ, ಜೈನುಬಿ ಬಡಗಿ, ಕರಿಯಮ್ಮ ತಳವಾರ, ಜುಬೇದಾಬಿ ಜಂಬೂರ, ಶಿವನಗೌಡ ರೋತಿ, ಮಲ್ಲಪ್ಪ ಬಣಕಾರ,

ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್. ಶಿವಪ್ಪನಾಯಕ, ಮಹೇಶ ನಾಯ್ಕ, ಆರೋಗ್ಯ ಕಾರ್ಯಕರ್ತೆ ನಂದನ ಜವಳಿ ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಪ್ರಭಾವತಿ ಮತ್ತು ಅನುಷಾ ಪ್ರಾರ್ಥನಾ ಗೀತೆ ಹಾಡಿದರು. ಪಿಡಿಓ ಎಚ್. ಗುರುಪ್ರಸಾದ ಸ್ವಾಗತಿಸಿದರು. ಪಿ.ಎಚ್. ತಿಮಲಾಪುರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT