ADVERTISEMENT

ಹೊಸ ಯಂತ್ರ ವಿನ್ಯಾಸ ಸ್ನಾತಕೋತ್ತರ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 9:40 IST
Last Updated 7 ಅಕ್ಟೋಬರ್ 2011, 9:40 IST

ರಾಣೆಬೆನ್ನೂರ: ತಂತ್ರಜ್ಞಾನದ ವೇಗದ ಮುನ್ನಡೆಯಿಂದ ಅನೇಕ ಹೊಸ ಕ್ಷೇತ್ರ ಗಳು ಪ್ರಾಮುಖ್ಯತೆ ಗಳಿಸುತ್ತವೆ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್, ನ್ಯಾನೋ ಟೆಕ್ನಾಲಜಿ ಘರ್ಷಣೆ ವಿಜ್ಞಾನ, ಮೆಕ್‌ಟ್ರಾನಿಕ್ಸ್ ಮುಂತಾದ ಶಾಖೆಗಳ ಬೆಳವಣಿಗೆಯತ್ತ ಸಾಧಿಸು ತ್ತಿದೆ ಎಂದು ಧಾರವಾಡದ ಶ್ರೀ ಧರ್ಮ ಸ್ಥಳ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್. ಮೋಹನಕುಮಾರ್ ಅವರು ಹೇಳಿದರು.

ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ, ಯಾಂತ್ರಿಕ ವಿಭಾಗದ ಅಡಿಯಲ್ಲಿ ಹೊಸ ಯಂತ್ರ ವಿನ್ಯಾಸ  ಸ್ನಾತಕೋ ತ್ತರ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ರಾದ ಡಾ.ಎಸ್.ಎನ್.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಡಿ, ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋ ಭಾವಬೆಳೆಸುವುದು ಅತ್ಯವಶ್ಯಕವಾಗಿದೆ. ಹೊಇಸ ಹೊಸ ತಂತ್ರಜ್ಞಾನಗಳನ್ನು ವಿದಾರ್ಥಿಗಳು ಅರಿತುಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪ್ರೊ. ದೈವಜ್ಞ, ಪ್ರೊ.ಕೆ.ಬಿ.ಗುರು ಪಾದಪ್ಪ, ಎಸ್.ವಿಶ್ವನಾಥ,  ಲೋ ಹಿತ್, ಎಸ್,ಬಿ. ಮಲ್ಲೂರು, ಹೇಮಂತ ಕುಮಾರ, ಎಂ.ಇ. ಶಿವಕುಮಾರ, ಕೃಷ್ಣಮೂರ್ತಿ, ರಮೇಶ, ರಾಜೇಶ, ವಿಜಯಕುಮಾರ, ಕಿರಣ, ರಾಜೇಶ ಕೋಡಬಾಳ ಮತ್ತಿತರರು ಉಪಸ್ಥಿತ ರಿದ್ದರು. ಸುಷ್ಮಾ ಪ್ರಾರ್ಥಿಸಿದರು.  ನಾಗ ಭೂಷಣ ನಿರೂಪಿಸಿದರು. ಪುನೀತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.