ADVERTISEMENT

‘ಪರಿಸರ ಸಂರಕ್ಷಣೆಯಲ್ಲಿ ಬದುಕಿನ ಸಾರ್ಥಕತೆ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:11 IST
Last Updated 11 ಡಿಸೆಂಬರ್ 2013, 6:11 IST

ಶಿಗ್ಗಾವಿ : ಪರಿಸರ ಹಾಗೂ ಪ್ರಾಣಿ ಪ್ರಪಂಚವನ್ನು ಪ್ರೀತಿಸಿ ಸಂರಕ್ಷಿಸುವಲ್ಲಿ ಬದುಕಿನ ಸಾರ್ಥಕತೆಯಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಕರೆನೀಡಿದರು. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿ ಸಹಯೋಗದಲ್ಲಿ  ಶ್ರೀ ಚನ್ನಬಸವೇಶ್ವರಹಸಿರು ಪಡೆಯನ್ನು (ಇಕೊ ಕ್ಲಬ್) ಉದ್ಘಾಟಿಸಿ ಅವರು ಮಾತನಾಡಿ, ಮನುಷ್ಯ ಸ್ವಾರ್ಥ ಸಂಕುಚಿತೆಯಿಂದ ಪರಿಸರ ಹಾಗೂ ಸಂಪತ್ತನ್ನು ಹಾಳು ಮಾಡುತ್ತಿದ್ದಾನೆ. ಪ್ರಕೃತಿಯಲ್ಲಿ ಓಝೋನ್ ಶಿಥಿಲಗೊಂಡು ಮನುಷ್ಯ ಅಪಾಯದ ಅಂಚಿಗೆ ಸೇರುತ್ತಿದ್ದಾನೆ ಎಂದು ವಿಷಾದಿಸಿದರು.

ಹಸಿರು ಪಡೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ  ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ  ಮಾಜಿ ಅಧ್ಯಕ್ಷ ಮಾರುತಿ ಶಿಡ್ಲಾಪುರ, ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ ಎಂಬ ಅರಿವು ಮೂಡಬೇಕಾಗಿದೆ. ಇಂತ ಜಾಗೃತಿ ಪ್ರತಿಯೊಬ್ಬರಲ್ಲಿ ಮೂಡಬೇಕಾಗಿದೆ ಎಂದರು.

ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಿದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಹಾನಗಲ್ಲಿನ ಅಂಜುಮನ್ ಕಾಲೇಜಿನ ಪ್ರಾಚಾರ್ಯ ಎ.ಎ. ನಾಶಿಪುಡಿ, ಪರಿಸರದ ಕುರಿತ ವಿದ್ಯಾರ್ಥಿಗಳ ಕಾಳಜಿ ಅವರ ಪಾಲಕರಿಗೆ ತಲುಪುವ ಮೂಲಕ ಪ್ರತಿಯೊಬ್ಬರಲ್ಲಿ ಮೂಡಬೇಕೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ, ನಮ್ಮ ಸಾಂಸ್ಕೃತಿಕ ಸಾಮಾಜಿಕ ಹಾಗೂ ಪ್ರಾಕೃತಿಕ ಪರಿಸರ ಶುದ್ಧವಾಗಿರಬೇಕು. ಅನಗತ್ಯ ದಾಹ ಕ್ಕಾಗಿ ಪರಿಸರ ಹಾಳು ಮಾಡುತ್ತಿರು ವುದು ಒಳ್ಳೆಯ ಬೆಳವಣಿಗೆಯಲ್ಲ  ಎಂದರು. ಕೆ.ಎಸ್.ಬರದೆಲಿ ಸ್ವಾಗತಿಸಿ ದರು, ಕೆ.ಬಸಣ್ಣ ನಿರೂಪಿಸಿದರು. ಎಂ.ಎಸ್. ಕುರಂದವಾಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.