ADVERTISEMENT

‘ಅಣಬೆ ಬೇಸಾಯದಿಂದ ಆರ್ಥಿಕ ಪ್ರಗತಿ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 9:25 IST
Last Updated 4 ಜನವರಿ 2018, 9:25 IST

ರಾಣೆಬೆನ್ನೂರು: ‘ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಜೊತೆಗೆ ಅಣಬೆ ಬೇಸಾಯ ಮಾಡಿದರೆ, ಅಪೌಷ್ಟಿಕತೆಯನ್ನೂ ನಿರ್ವಹಿಸಬಹುದು’ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ನುಡಿದರು.

ತಾಲ್ಲೂಕಿನ ಹನುಮನಮಟ್ಟಿಯಲ್ಲಿ ತೋಟಗಾರಿಕೆ ಇಲಾಖೆ, ಹಾವೇರಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಹನುಮನಮಟ್ಟಿ  ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಶನಿವಾರ ನಡೆದ ಅಣಬೆ ಬೇಸಾಯದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಏಕನಾಥ ಬಾನುವಳ್ಳಿ ಮಾತನಾಡಿ, ‘ಅಣಬೆ ಬೇಸಾಯ ರೈತ ಕುಟುಂಬದ ಆದಾಯ ಹೆಚ್ಚಿಸಬಲ್ಲದು’ ಎಂದರು.

ADVERTISEMENT

ತೋಟಗಾರಿಕೆ ಉಪನಿರ್ದೇಶಕ ಎಸ್‌.ಪಿ. ಭೋಗಿ ಅವರು ಮಾತನಾಡಿದರು. ಕೃಷಿ ಕಾಲೇಜಿನ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರುನೂರ ನವಾಜ ಅವರು ವೈಜ್ಞಾನಿಕ ಅಣಬೆ ಬೇಸಾಯದ ಬಗ್ಗೆ ಮಾಹಿತಿಯನ್ನು ನೀಡಿದರು.

ಅಣಬೆ ಬೇಸಾಯದ ವಿಶೇಷ ತರಬೇತಿದಾರ ಮಲ್ಲಿಕಾರ್ಜುನ ಬಂಕಾಪುರ, ಅಣಬೆ ಬೇಸಾಯದ ಕ್ರಮಗಳು ಮತ್ತು ಮಾರುಕಟ್ಟೆಯ ವ್ಯವಸ್ಥೆ ಮತ್ತು ಬೇಸಾಯದ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.

ಕಜ್ಜರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೀಲವ್ವ ಈ ಬುಡಪನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ನೀಲಕಂಠಪ್ಪ ಕುಸಗೂರ, ಚೈತ್ರಾ ಮಾಗನೂರ, ರೂಪ್ಲೆಪ್ಪ ರಾಮಪ್ಪ ಹಂಚಿನಮನಿ, ರಸೂಲ್‌ಖಾನ್ ಪಠಾಣ, ಕಮಲವ್ವ ಚನ್ನಬಸಪ್ಪ ಪಾರ್ವತೆರ, ಡಿ.ಕೆ. ಹಿತ್ತಲಮನಿ ಇದ್ದರು.

ತೋಟಗಾರಿಕೆ ‌ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನೂರಅಹ್ಮದ ಹಲಗೇರಿ, ಡಾ.ಕೆ.ಬಿ.ಯಡಹಳ್ಳಿ, ಡಾ. ಗುರುಪ್ರಸಾದ ಜಿ.ಎಸ್., ಡಾ. ಪ್ರಿಯಾ ಪಿ, ಡಾ.ಕೆ.ಪಿ.ಗುಂಡಣ್ಣವರ, ಡಾ. ಹರೀಶ ಡಿ.ಕೆ., ಕಲ್ಲೇಶ ಡಿ.ಟಿ ಇದ್ದರು.

250 ಜನ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.