ADVERTISEMENT

‘ಮಹಿಳೆಯರ ಸಾಕ್ಷರತೆ ಪ್ರಮಾಣ ಹೆಚ್ಚಲಿ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 10:10 IST
Last Updated 29 ಜನವರಿ 2018, 10:10 IST

ಶಿಗ್ಗಾವಿ: ‘ಮಹಿಳಾ ಸಾಕ್ಷರತೆ ಪ್ರಮಾಣ ಅಧಿಕವಾಗಬೇಕು. ಇದರಿಂದ ಅವರು ಉನ್ನತ ಸ್ಥಾನಮಾನ ಹೊಂದಲು ಸಾಧ್ಯವಾಗುತ್ತದೆ’ ಎಂದು ಶಿಗ್ಗಾವಿ ಪೊಲೀಸ್‌ ಠಾಣೆ ಪಿಎಸ್‌ಐ ಅನ್ನಪೂರ್ಣ ಹುಲಗೂರ ಹೇಳಿದರು.

ತಾಲ್ಲೂಕಿನ ಬಂಕಾಪುರದ ಸೇಂಟ್‌ ಥಾಮಸ್‌ ನ್ಯೂಲಲೈಫ್‌ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಸಂಘಟನೆಗಳ ಮೂಲಕ ಸಮಾಜದ ಅನಿಷ್ಠಗಳ ವಿರುದ್ಧ ಹೋರಾಡಬೇಕು’ ಎಂದ ಅವರು, ‘ಹೆಣ್ಣು ಮಗುವೆಂದು ಅರ್ಧಕ್ಕೆ ಶಿಕ್ಷಣ ನಿಲ್ಲಿಸಬೇಡಿರಿ. ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಅದರ ಪ್ರಯೋಜನ ಮಕ್ಕಳಿಗೆ ತುಪಿಸುವ ಹೊಣೆ ನಮ್ಮೆಲ್ಲರದಾಗಬೇಕು’ ಎಂದು ಪೋಷಕರಿಗೆ ಸಲಹೆ ನೀಡಿದರು.

ADVERTISEMENT

ನ್ಯೂ ಲೈಫ್‌ ಸಂಪೂರ್ಣ ಸುವಾರ್ತ ಸಭೆ ಅಧ್ಯಕ್ಷ ವೀರಣ್ಣ ಕೂಲಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುರೇಶಗೌಡ ಪಾಟೀಲ, ವಕೀಲ ಬಸವರಾಜ ಕೂಲಿ, ಬಿಇಒ ಎಂ.ಎಚ್‌.ಪಾಟೀಲ, ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಬಡ್ಡಿ, ಎಎಸ್‌ಐ ಗುಪ್ತಚರ ವಿಭಾದ ಅಧಿಕಾರಿ ಡಿ.ಎನ್‌.ಕೂಡಲ, ಶಿಕ್ಷಣ ಸಂಪನ್ಮೂಲ ಅಧಿಕಾರಿ ಪರಮೇಶ್ವರ ಬಾರಂಗಿ, ಬಸಣ್ಣ ಬೆಟಗೇರಿ, ನಾಗಪ್ಪ ತೊಂಡೂರ ಇದ್ದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.